ಕೊಡಿಹಬ್ಬದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

ಕೋಟೇಶ್ವರ: ಇತಿಹಾಸ ಪ್ರಸಿದ್ಧ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬೆಂಗಳೂರು ಮಯೂರ ಗ್ರೂಪ್ಸ್‌ನ ಮುಖ್ಯಸ್ಥ ಟಿ.ಶ್ರೀನಿವಾಸ ಮೂರ್ತಿ ಉತ್ಸವ ಉದ್ಘಾಟಿಸಿದರು. 

ಜ್ಯೋತಿಷ್‌ವಿದ್ವಾನ್ ಟಿ.ವಾಸುದೇವ ಜೋಯಿಸ ಧಾರ್ಮಿಕ ಪ್ರವಚನ ನೀಡಿ ಉಜ್ವಲ ಸಂಸ್ಕೃತಿ, ಭವ್ಯ ಪರಂಪರೆ ಹೊಂದಿರುವ ಕರ್ಮಭೂಮಿ ಭಾರತ. ಇಡಿ ವಿಶ್ವವೇ ಭಾರತವನ್ನು ಅನುಕರಿಸುವ ಸಮಯ ಈಗ ಬಂದಿದೆ. ಸಂಸ್ಕೃತಿಯ ಭದ್ರಬುನಾದಿಯಾಗಿರುವ ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದರು. 

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವತ್ತ ತಹಸೀಲ್ದಾರ ಆನಂದ ಶೆಟ್ಟಿ ವೆಬ್‌ಸೈಟ್ ಬಿಡುಗಡೆಗೊಳಿಸಿದರು. ರೋಟರಿ ಸಹಾಯಕ ಗವರ್ನರ್ ಗಣೇಶ್ ಶೆಟ್ಟಿ ಮೊಳಹಳ್ಳಿ ಶುಭಾಶಂಸನೆಗೈದರು. ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಗುರುರಾಜ ರಾವ್, ಗಣೇಶ್ ಭಟ್ ಗೋಪಾಡಿ, ವಿನೋದ್ ಶೇಟ್, ಕುಸುಮ ದೇವಾಡಿಗ, ವನಜ ಪೂಜಾರ‌್ತಿ, ಕಾರ್ಯನಿರ್ವಹಣಾಧಿಕಾರಿ ಗಣೇಶರಾವ್ ಉಪಸ್ಥಿತರಿದ್ದರು. ಸುಧಾ ರಾಜ್‌ಗೋಪಾಲ್ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರಭಾಕರ ಕುಂಭಾಸಿ ಸ್ವಾಗತಿಸಿದರು. ಗುರುರಾಜರಾವ್ ನಿರ್ವಹಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com