ಕೋಟ: ಬಿಜೆಪಿಯಿಂದ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ 50 ಸಾವಿರ ಸದಸ್ಯತ್ವ ನೋಂದಾವಣೆ ಗುರಿಯನ್ನು ಕಾರ್ಯಕರ್ತರು ಹೊಂದಬೇಕು ಎಂದು ಸಂಸದೆ ಶೋಭಾ ಕರದ್ಲಾಂಜೆ ನುಡಿದರು
ಕೋಟ ಬಿಜೆಪಿ ಶಕ್ತಿ ಕೇಂದ್ರದ ವ್ಯಾಪ್ತಿಯ ಕೋಡಿ ಕನ್ಯಾಣದಲ್ಲಿ ಜೆಟ್ಟಿ ಕಾಮಗಾರಿ ವೀಕ್ಷಿಸಿದ ಬಳಿಕ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಒಬ್ಬ ಸಂಸದರಿಗೆ ವರ್ಷಕ್ಕೆ ಕೇವಲ 5 ಕೋಟಿ ಅನುದಾನ ದೊರೆಯುತ್ತಿದ್ದು, ಈ 5 ಕೋಟಿಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರ ಅಭಿವದ್ಥಿ ಮಾಡಲು ಸಾಧ್ಯವೇ ಎಂದವರು ಪ್ರಶ್ನಿಸಿದರು .
ಮುಖ್ಯ ಅತಿಥಿಯಾಗಿ ಆಗಮಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಸದಸ್ಯತ್ವ ಅಭಿಯಾನದ ಬಗ್ಗೆ ಮಾತನಾಡಿದರು. ಅಧ್ಯಕ್ಷತೆಯನ್ನು ಕುಂದಾಪುರ ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಜೇಶ ಕಾವೇರಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಕೋಡಿ ಕನ್ಯಾಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ಪೂಜಾರಿ,ಕೋಟ ಬಿಜೆಪಿ ಶಕ್ತಿದ ಅಧ್ಯಕ್ಷ ವಿಠಲ ಪೂಜಾರಿ, ಕಾರ್ಯದರ್ಶಿ ಸಂದೀಪ್ ಕುಂದರ್, ಕೋಡಿ ಕನ್ಯಾಣ ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಮಹಾಬಲ ಕುಂದರ್, ಕಾರ್ಯದರ್ಶಿ ಸುಧೀರ ಕುಂದರ್, ಉಪಾಧ್ಯಕ್ಷರಾದ ಲಕ್ಷ್ಮಣ ಖಾರ್ವಿ, ಲೋಹಿತ್, ಲೋಕೇಶ್ ಉಪಸ್ಥಿತರಿದ್ದರು.ಕುಂದಾಪುರ ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಜಗನ್ನಾಥ ಅಮೀನ್ ಸ್ವಾಗತಿಸಿದರು, ವಂದಿಸಿದರು.
0 comments:
Post a Comment