'ಕೃಷಿ ಉತ್ಸವ-2014'' ಉದ್ಘಾಟನೆ

ಕೋಟೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕುಂದಾಪುರ ತಾಲೂಕು ಇದರ ಸ್ವ-ಸಹಾಯ ಸಂಘಗಳ ಸದಸ್ಯರ ಖಾತೆಗಳನ್ನು ಬ್ಯಾಂಕಿಗೆ ವರ್ಗಾಯಿಸಲಾಗುವುದು. ಅಲ್ಲದೇ ಬ್ಯಾಂಕ್‌ಗಳಲ್ಲಿ ಶೇ. 2 ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು. ಆ ಮೂಲಕ ಸಂಘದ ಸದಸ್ಯರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಶ್ರೀ ಕ್ಷೇ. ಧ. ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ಕೇಂದ್ರ ಕಚೇರಿ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ ಹೇಳಿದರು.
      ಕೋಟೇಶ್ವರದ ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆ ಆವರಣದಲ್ಲಿ ಡಿ. 23 ಹಾಗೂ ಡಿ. 24 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ತಾಲೂಕು, ಬಸೂÅರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ, ಗುರುಕುಲ ವಿದ್ಯಾಸಂಸ್ಥೆ ವಕ್ವಾಡಿ, ಕೋಟೇಶ್ವರ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕುಂದಾಪುರದ ಸಹಯೋಗದಲ್ಲಿ ಆಯೋಜಿಸಲಾದ 2 ದಿನಗಳ 'ಕೃಷಿ ಉತ್ಸವ-2014' ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.
     ಸ್ವ-ಸಹಾಯ ಸಂಘಗಳ ಸದಸ್ಯರ ಖಾತೆಯನ್ನು ಬ್ಯಾಂಕ್‌ಗೆ ವರ್ಗಾಯಿಸುವಾಗ ಆಯಾಯ ಗ್ರಾಮಗಳ ಗ್ರಾಮಸಭೆಗಳಲ್ಲಿ ಅಲ್ಲಿನ ಸಂಘದ ಸದಸ್ಯರು ಬಡತನದ ರೇಖೆಯಿಂದ ಕೆಳಗಿನವರು ಎಂಬುದನ್ನು ಸಾಬೀತುಪಡಿಸುವುದರೊಡನೆ ಈ ಪ್ರಕ್ರಿಯೆಯಲ್ಲಿ ಸಹಕರಿಸಬೇಕು ಎಂದು ಅವರು ಹೇಳಿದರು.
      ಡಾ| ಕಸ್ತೂರಿ ರಂಗನ್‌ ವರದಿ ಬಗ್ಗೆ ಪ್ರಸ್ತಾಪಿಸಿದ ಡಾ| ಎಲ್‌.ಎಚ್‌. ಮಂಜುನಾಥ್‌, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮುಗª ಜನರ ಬದುಕಿನ ಮೇಲೆ ಬರೆ ಎಳೆಯುವ ಕೆಲಸವಾಗಬಾರದು. ಅಭಿವೃದ್ಧಿ ಹೆಸರಿನಲ್ಲಿ ಜನವಸತಿ ತೆರವುಗೊಳಿಸಿದಲ್ಲಿ ಹಳ್ಳಿಯಿಂದ ಪೇಟೆಗೆ ಸಾಗುವ ಜನರಿಗೆ ಅಲ್ಲಿನ ವಾತಾವರಣದಲ್ಲಿ ಹೊಂದಿ ಬಾಳುವುದು ಕಷ್ಟವಾದೀತು. ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗದಂತೆ ವರದಿಯಲ್ಲಿ ತಿದ್ದುಪಡಿ ಮಾಡುವ ಜವಾಬ್ದಾರಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕಿದೆ ಎಂದರು.
      ಮುಖ್ಯ ಅತಿಥಿ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿತ್ವದಿಂದ ಮಹಿಳೆಯರು ಇಂದು ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಾಗಿದೆ. ಸರಕಾರದ ಯೋಜನೆಗಳೊಡನೆ ಡಾ| ಹೆಗ್ಗಡೆ ಅವರು ಕೈಜೋಡಿಸಿರುವುದು ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿ. ಪ್ರಗತಿ ಬಂಧುವಿನಂತಹ ಸಂಘಟನೆ ಆರಂಭಿಸುವುದರ ಮೂಲಕ ಪರಸ್ಪರ ಸೌಹಾರ್ದ ಮೂಡಿಸುವುದರೊಡನೆ ಹೊಸ ಚಿಂತನೆಗೆ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿಯೋರ್ವ ಸದಸ್ಯರು ಯೋಜನೆ ಮಹತ್ವ ಅರಿತು ಸಹಕರಿಸಬೇಕು ಎಂದರು.

ಕಾಂಪ್ಕೋ ಸಂಸ್ಥೆ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಟ್‌ ಮಾತನಾಡಿ, ಕೃಷಿ ಭೂಮಿ ಕಡಿಮೆಯಾಗುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದರಲ್ಲದೇ ಕೃಷಿಕರಿಗೆ ಸೂಧಿರ್ತಿ ನೀಡುವ ಕೆಲಸವಾಗಬೇಕು. ಅಡಿಕೆ ಬೆಳೆ ಕೆ.ಜಿ. ಗೆ ರೂ. 250 ಆಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ರೂ. 90ರಷ್ಟು ಹೆಚ್ಚಾಗಿರುವುದು ಅಡಿಕೆ ಬೆಳೆಗಾರರಿಗೆ ನೆಮ್ಮದಿ ಕೊಡುವ ವಿಚಾರ. ಅಡಿಕೆ ಬೆಳೆ ನಿಷೇಧ ಹಾಗೂ ರದ್ದಾಗುವ ವದಂತಿ ಸತ್ಯಕ್ಕೆ ದೂರ. ಅಡಿಕೆ ಬೆಳೆ ಕೃಷಿಕರು ಆ ಬೆಳೆಯೊಡನೆ ಪೂರಕ ಬೆಳೆ ಬೆಳೆಸುವುದು ಸೂಕ್ತ ಎಂದರು.

ಉಡುಪಿ ಜಿ. ಪಂ. ಅಧ್ಯಕ್ಷೆ ಸವಿತಾ ಕೋಟ್ಯಾನ್‌, ಉಡುಪಿ ಜಿ. ಪಂ. ಉಪಾಧ್ಯಕ್ಷ ಪ್ರಕಾಶ ಮೆಂಡನ್‌, ಕುಂದಾಪುರ ತಾ. ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ, ಕಾಳಾವರ ಗ್ರಾ. ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕುಂದಾಪುರ ತಾಲೂಕು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ, ಶ್ರೀ ಕೇತ್ರ ಧರ್ಮಸ್ಥಳದ ಪ್ರಾದೇಶಿಕ ನಿರ್ದೇಶಕ ಮಹಾವೀರ ಆಜ್ರಿ, ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಆಡಳಿತ ನಿರ್ದೇಶಕರಾದ ಕೆ. ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಅನುಪಮಾ ಶೆಟ್ಟಿ, ಶ್ರೀ. ಕ್ಷೇ. ಧ. ಗ್ರಾ. ಯೋಜನೆ ತಾಲೂಕು ಯೋಜನಾಧಿಧಿಕಾರಿ ಅಮರ ಪ್ರಸಾದ ಶೆಟ್ಟಿ, ಕುಂದಪ್ರಭ ಸಂಪಾದಕ ಯು.ಎಸ್‌. ಶೆಣೈ, ಜಿಲ್ಲಾ ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ನಿರ್ದೇಶಕ ದುಗ್ಗೇಗೌಡ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಪ್ರಮುಖ ಹಾಗೂ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ. ಕ್ಷೇ. ಧ. ಚಿತ್ತೂರು ವಲಯ ಮೇಲ್ವಿಚಾರಕ ಪ್ರಭಾಕರ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇ. ಧ. ಗ್ರಾಮಾಭಿವೃದ್ಧಿ ಯೋಜನೆಯ ವಲಯ ಪ್ರಮುಖ ಸುಬ್ರಹ್ಮಣ್ಯ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ಸಭೆಯ ಬಳಿಕ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಕಾರ್ಯಕ್ರಮಗಳು, ಶ್ರೀ ಪದ್ಧತಿ ಹಾಗೂ ಶ್ರೀ ರೈತ ಕೂಟ, ಹಡಿಲು ಭೂಮಿಗೆ ಕಾಯಕಲ್ಪ, ಪ್ರಗತಿಯತ್ತ ಮಹಿಳೆಯ ಚಿತ್ತ, ಆಧುನಿಕ ಸೌಲಭ್ಯಗಳ ಸಾಧಕ ಬಾಧಕ, ಕೌಟುಂಬಿಕ ಬದುಕಿನಲ್ಲಿ ಮಹಿಳೆಯರ ಪಾತ್ರ, ಕೃಷಿ ಮತ್ತು ಮಹಿಳೆ, ಸ್ವತ್ಛ ಕುಟುಂಬ ಸ್ವತ್ಛ ಗ್ರಾಮ ಎಂಬಿತ್ಯಾದಿ ವಿಚಾರಗಳ ಬಗ್ಗೆ ದುಗ್ಗೇಗೌಡ, ಪ್ರಕಾಶರಾವ್‌, ಮನೋಜ್‌ ಮಿನೇಜಸ್‌, ಮಹಾವೀರ ಆಜ್ರಿ, ಮನೋರಮ ಭಟ್‌, ಡಾ| ರಾಜೇಶ್ವರಿ, ಡಾ| ಜಯಲಕ್ಷ್ಮೀ, ಜಯರಾಮ ನೆಲ್ಲಿತ್ತಾಯ, ಡಾ| ಪ್ರತಾಪ, ರಾಘವೇಂದ್ರ ವಿಚಾರ ಮಂಡಿಸಿದರು.

'ಕೃಷಿ ಉತ್ಸವ-2014' ಉದ್ಘಾಟನೆ

ಕೃಷಿ ಉತ್ಸವ 2014ರ ವಸ್ತು ಪ್ರದರ್ಶನ ಮಳಿಗೆಯನ್ನು ಕ್ಯಾಂಪ್ಕೋ ಸಂಸ್ಥೆ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಟ್‌ ಉದ್ಘಾಟಿಸಿದರು. ಈ ಸಂದರ್ಭ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಜಿ. ಪಂ. ಅಧ್ಯಕ್ಷೆ ಸವಿತಾ ಕೋಟ್ಯಾನ್‌, ಉಪಾಧ್ಯಕ್ಷ ಪ್ರಕಾಶ ಮೆಂಡನ್‌, ಬುದ್ಧರಾಜ ಶೆಟ್ಟಿ, ಗಣೇಶ್‌ ಭಟ್‌, ರವೀಂದ್ರ ದೊಡ್ಮನೆ, ಶ್ರೀನಿವಾಸ ಕುಂದರ್‌ ಮೊದಲಾದವರು ಉಪಸ್ಥಿತರಿದ್ದರು.

ಜಾನುವಾರು ಪ್ರದರ್ಶನ

'ಕೃಷಿ ಉತ್ಸವ-2014'ರ ಜಾನುವಾರು ತಳಿ ಪ್ರದರ್ಶನವನ್ನು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಈ ಸಂದರ್ಭ ಉದ್ಯಮಿಗಳಾದ ಜಯಕರ ಶೆಟ್ಟಿ, ಸಬ್ಲಾಡಿ ಮಂಜಯ್ಯ ಶೆಟ್ಟಿ, ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಸುಧಾಕರ ಶೆಟ್ಟಿ ಬಾಂಡ್ಯ, ಜಿ. ಪಂ. ಉಪಾಧ್ಯಕ್ಷ ಪ್ರಕಾಶ ಮೆಂಡನ್‌ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com