ಕಸ್ತೂರಿ ರಂಗನ್ ವರದಿಯ ಬಗ್ಗೆ ಆತಂಕ ಬೇಡ: ಸಂಸದೆ ಶೋಭಾ

ಕುಂದಾಪುರ: ಪರಿಸರ ಉಳಿದಿದ್ದರೆ ಅದು ಅಲ್ಲಿನ ಮೂಲನಿವಾಸಿಗಳಿಂದ. ಕಸ್ತೂರಿ ರಂಗನ್ ವರದಿಯ ಬಗ್ಗೆ ಯಾವ ಆತಂಕಪಡಬೇಕಾಗಿಲ್ಲ. ಪಶ್ಚಿಮಘಟ್ಟ ತಪ್ಪಲು ನಿವಾಸಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ. 

ಕೋಟೇಶ್ವರ ಸಮೀಪದ ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ವಲಯ ಹಮ್ಮಿಕೊಂಡಿರುವ ಕೃಷಿ ಉತ್ಸವದಲ್ಲಿ ಪಾಲ್ಗೊಂಡ ಅವರು ಪರಿಸರ ಪ್ರಜ್ಞೆ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. 

ರೈತರಿಗೆ ಮನದಟ್ಟಾಗುವ ರೀತಿಯಲ್ಲಿ ಉತ್ಸವ ಮೂಡಿಬಂದಿದೆ. ಕೃಷಿಯಲ್ಲಿ ಲಾಭಾಂಶವಿಲ್ಲ ಎಂದು ಭಾವಿಸಿ ಯುವ ಪೀಳಿಗೆ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಆಹಾರಕ್ಕಾಗಿ ಬೀದಿಗೆ ಬೀಳಬೇಕಾಗಬಹುದು. ನಮ್ಮದು ಕಷಿ ಪ್ರಧಾನ ದೇಶ. ಆಹಾರ ಪದಾರ್ಥ ಅನ್ಯದೇಶಗಳಿಗೆ ರಫ್ತು ಮಾಡುವ ತಾಕತ್ತು ಹೊಂದಿದೆ ಆದರೆ ನಾವು ಬೆಳೆದ ಕೃಷಿ ಪದಾರ್ಥವನ್ನು ನಾವೆ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com