ಕುಂಭಾಸಿ ಕೊರಗರ ಕಾಲೊನಿಯಲ್ಲಿ ‘ಹೊಸ ಮನೆ’ ಲೋಕಾರ್ಪಣೆ

ಕುಂಭಾಸಿ :  ಕುಂಭಾಸಿ ಗ್ರಾಮ ಪಂಚಾಯಿತಿ ಕಚೇರಿ ಸಮೀಪದಲ್ಲಿರುವ ಕೊರಗ ಕಾಲೊನಿ ಯಲ್ಲಿ ತೆಕ್ಕಟ್ಟೆ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಸರಕಾರದ ಸಹಯೋಗದೊಂದಿಗೆ ನಿರ್ಮಿಸಿ ಕೊಟ್ಟಿರುವ ಸುಸಜ್ಜಿತ ಮನೆಗಳ ಲೋಕಾರ್ಪಣೆ ಕಾರ್ಯ ನಡೆಯಿತು. 

ಕಾಲೊನಿಯ ಲಚ್ಚು, ಸಾಲು ಮತ್ತು ಶಂಕರ ಎಂಬವರಿಗೆ ಮೊದಲ ಹಂತ ವಾಗಿ ಸರಕಾರದ 1.75 ಲಕ್ಷ ನೆರವಿ ನೊಂದಿಗೆ ಅಂದಾಜು ರೂ.5ಲಕ್ಷ ವೆಚ್ಚ ದಲ್ಲಿ ನಿರ್ಮಿಸಲಾಗಿರುವ ತಾರಸಿ ಮನೆ ಯನ್ನು ಲಯನ್ಸ್ ಜಿಲ್ಲಾ ಗವರ್ನರ್ ಸುರೇಶ್ ಪ್ರಭು ಉದ್ಘಾಟಿಸಿದರು. 

ತೆಕ್ಕಟ್ಟೆ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಅರ್ಥಪೂರ್ಣ ಕಾರ್ಯ ಮಾಡಿ ದೆ ಎಂದು ಶ್ಲಾಘಿಸಿದ ಅವರು, ಲಯನ್ಸ್ ಕಂದಾಯ ಜಿಲ್ಲೆಯ ಪೈಕಿ ತೆಕ್ಕಟ್ಟೆ ಲಯನ್ಸ್ ಕ್ಲಬ್ ಬಡವರಿಗೆ ಅತಿ ಹೆಚ್ಚು ಮನೆ ಒದಗಿಸಿಕೊಟ್ಟ ಕೀರ್ತಿಗೆ ಭಾಜನ ವಾಗಿದೆ. ಅದರಲ್ಲೂ ಸಮಾಜದ ಕಟ್ಟಕ ಡೆಯ ತೀರಾ ಸಂಕಷ್ಟದಲ್ಲಿದ್ದ ಕೊರಗ ಕಾ ಲೊನಿಯ ಬಡ ಕುಟುಂಬಕ್ಕೆ ಮನೆ ಒದ ಗಿಸಿಕೊಡುವ ಮೂಲಕ ಮಾದರಿ ಕೆಲಸ ಮಾಡಿದೆ. ಲಯನ್ಸ್ ವಾರ್ಷಿಕವಾಗಿ ಸಮಾಜ ಸೇವೆಗೋಸ್ಕರ ಸುಮಾರು 4 ಕೋಟಿ ರೂ. ವ್ಯಯಿಸುತ್ತಿದೆ. ಈ ಹಣ ಅಂತಾರಾಷ್ಟ್ರೀಯ ಮಟ್ಟದಿಂದ ಬರೋ ದಿಲ್ಲ. ಲಯನ್ಸ್ ಪದಾಧಿಕಾರಿಗಳೇ ತ ಮ್ಮ ದುಡಿಮೆಯ ಉಳಿತಾಯ ಹಣವ ನ್ನು ಸೇವೆಗಾಗಿ ಬಳಸುತ್ತಿದ್ದಾರೆ ಎಂದರು, 

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶುಭಹಾರೈಸಿದರು. ಕುಂದಾಪುರ ತಾಪಂ ಅಧ್ಯಕ್ಷ ಭಾಸ್ಕರ ಬಿಲ್ಲವ ಮಾತನಾಡಿ, ಲಯನ್ಸ್ ಕ್ಲಬ್‌ನ ಕಾರ್ಯ ರಾಜ್ಯ, ದೇಶಕ್ಕೆ ಮಾದರಿ ಯಾಗಿದೆ. ಸೇವಾ ಸಂಸ್ಥೆಗಳು ಮಾಡ ಬೇಕಾದ ಕರ್ತವ್ಯವನ್ನು ನೆನಪಿಸಿದೆ ಎಂದರು. 

ಜಿಪಂ ಸದಸ್ಯ ಗಣಪತಿ ಟಿ. ಶ್ರೀಯಾನ್ ಮಾತನಾಡಿ, ಒಂದು ಸಮ ಯದಲ್ಲಿ ಹಾಳು ಕೊಂಪೆಯಂತಿದ್ದ ಕಾಲೊನಿ ಈಗ ಹೊಸ ರೂಪು ಪಡೆದುಕೊಂಡಿದೆ. ಕೊರಗ ಸಂಘಟನೆ ಯ ವಿದ್ಯಾವಂತ ಸಂಘಟಕರ ಪ್ರಯ ತ್ನದ ಫಲವಿದು ಎಂದು ತಿಳಿಸಿದರು. ಕುಂಭಾಸಿ ಗ್ರಾಪಂ ಅಧ್ಯಕ್ಷ ಗೋವಿಂದ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. 

ತೆಕ್ಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ ಕುಮಾರ ಶೆಟ್ಟಿ, ಲಯನೆಸ್ ಅಧ್ಯಕ್ಷೆ ವೀಣಾ ಯು. ಶೆಟ್ಟಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪ್ರಕಾಶ್ ಬೆಟ್ಟಿನ್, ಲಯನ್ಸ್ ಪ್ರಮುಖ ಪಿ.ಎನ್. ಜೇಕಬ್, ಮಲ್ಯಾಡಿ ಸೀತಾರಾಮ ಶೆಟ್ಟಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ, ಐಟಿಡಿಪಿ ಅಧಿಕಾರಿ ವಿಶ್ವನಾಥ್ ಶೆಟ್ಟಿ, ಗಣೇಶ್ ಬಾರ್ಕೂರು, ಪಿಡಿಓ ಗಾಯತ್ರಿ, ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಶೋಭಾ ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ವಿ.ಗಣೇಶ್ ಸ್ವಾಗತಿಸಿದರು. ಕೆದೂರು ಸೀತಾರಾಮ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿನೀತಾ ಕಾರ್ಯಕ್ರಮ ನಿರ್ವಹಿಸಿದರು. ಶೇಖರ ಮರವಂತೆ ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com