ರಾಜ್ಯ ದಲಿತ ಸಂಘರ್ಷ ಸಮಿತಿಯ ಸಮಾನ ಮನಸ್ಕ ದಲಿತ ನಾಯಕರ ಸಭೆ

ಕುಂದಾಪುರ: ಸ್ವಾರ್ಥ ತುಂಬಿದ ನಾಯಕರಿಂದಾಗಿ ದಲಿತ ಚಳವಳಿಗಳಿಗೆ ಗೆದ್ದಲು ಹಿಡಿಯುತ್ತಿದೆ. ಛಿದ್ರಗೊಂಡಿರುವ ದಲಿತ ಸಂಘಟನೆಯನ್ನು ಒಂದೆ ವೇದಿಕೆಯಡಿ ತರುವ ಮೂಲಕ ಸಮಾನ ಮನಸ್ಕರು ಒಟ್ಟು ಸೇರಿ ದಲಿತ ಹೋರಾಟ ಬಲಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಜಯನ್ ಮಲ್ಪೆ ಹೇಳಿದರು. 

ಇಲ್ಲಿನ ಅಂಬೇಡ್ಕರ ಭವನದಲ್ಲಿ ಜರುಗಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಮಾನ ಮನಸ್ಕ ದಲಿತ ನಾಯಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 

ಸಂಘಟನೆ ಎನ್ನುವುದು ಕೊಡೆ ಇದ್ದ ಹಾಗೆ. ಸಮುದಾಯಕ್ಕೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸಂಘಟನೆಗಳು ಪ್ರಾಮಾಣಿಕ ಕೆಲಸ ಮಾಡಬೇಕು. ಆದರೆ ಇತ್ತೀಚೆಗಿನ ದಿನಗಳಲ್ಲಿ ಸ್ವಾರ್ಥ ಮತ್ತು ಬ್ಲ್ಯಾಕ್‌ಮೈಲ್ ತಂತ್ರಗಳು ಹೆಚ್ಚುತ್ತಿದ್ದು ಇದರಿಂದ ಸಂಘಟನೆಗಳು ಛಿದ್ರವಾಗುತ್ತಿವೆ ಎಂದು ಅವರು ತಿಳಿಸಿದರು. 

ಸಮಿತಿ ಜಿಲ್ಲಾ ಸಂಚಾಲಕ ಶ್ಯಾಮರಾಜ ಬಿರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ನ್ಯಾಯವಾದಿ ಮಂಜುನಾಥ ಗಿಳಿಯಾರು, ದಲಿತ ಚಿಂತನ ನಾರಾಯಣ ಮಣೂರು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಠಲ ತೊಟ್ಟಂ, ಸಂಜೀವ ತೆಕ್ಕಟ್ಟೆ, ವಾಸು ನೇಜಾರು, ಮುಡೂರ ಅಂಬಾಗಿಲು, ಸುಂದರ್ ಕಪ್ಪೆಟ್ಟು ಉಪಸ್ಥಿತರಿದ್ದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com