ಮಣ್ಣುಗುಳಿ ದೇವಾಡಿಗ ಸಮಾಜದ ಸಮುದಾಯ ಭವನ ಉದ್ಘಾಟನೆ

ಕುಂದಾಪುರ: ಭಾರತೀಯ ಸಂಸ್ಕೃತಿಯಲ್ಲಿ ಗುರುಶಿಷ್ಯ ಸಂಬಂಧ ಅತ್ಯಂತ ಮಹತ್ವಪೂರ್ಣವಾದುದು. ದೇವಾಡಿಗ ಸಮಾಜದವರು ಶಂಗೇರಿ ಶ್ರೀಶಾರದಾಪೀಠವನ್ನು ತಮ್ಮ ಗುರುಪೀಠವೆಂದು ಪರಂಪರೆಯಿಂದ ನಂಬಿದವರು. ಆದ್ದರಿಂದ ತಾವು ಭವ್ಯವಾಗಿ ನಿರ್ಮಿಸಿರುವ ದೇವಾಡಿಗ ಸಮುದಾಯ ಭವನವನ್ನು ಇಂದು ತಮ್ಮ ಗುರುಗಳಿಂದಲೇ ಉದ್ಘಾಟನೆ ಮಾಡಿಸುತ್ತಿದ್ದಾರೆ. ಚಾತುರ್ಮಾಸ್ಯಕಾಲದಲ್ಲಿ ಪ್ರತಿವರ್ಷವೂ ತಪ್ಪದೆ ಶಂಗೇರಿಗೆ ಬಂದು ಸಾಮೂಹಿಕವಾಗಿ ಗುರುದರ್ಶನ ಮಾಡುತ್ತಿದ್ದಾರೆ. ಈ ಗುರುಶಿಷ್ಯ ಸಂಬಂಧ ನಿರಂತರವಾಗಿ ನಡೆದು ಬರಲಿ ಎಂದು ಶಂಗೇರಿ ಶ್ರೀಶಾರದಾಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀಭಾರತೀತೀರ್ಥ ಮಹಾಸ್ವಾಮೀಜಿ ಹೇಳಿದರು. 

ಅವರು ಮಣ್ಣುಗುಳಿಯಲ್ಲಿ ಶಂಗೇರಿ ಶ್ರೀಮಠದ ಪಾರಂಪರಿಕ ಶಿಷ್ಯರಾದ ದೇವಾಡಿಗ ಸಮಾಜದವರು ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ದೇವಾಡಿಗ ಸಮುದಾಯ ಭವನ ಉದ್ಘಾಟಿಸಿ ಆಶೀರ್ವಚನ ನೀಡಿದರು. 

ಶ್ರೀಶಾರದಾಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ.ಎಚ್.ವಿ.ನರಸಿಂಹಮೂರ್ತಿ, ಜಗದ್ಗುರುಗಳವರ ಆಪ್ತಕಾರ್ಯದರ್ಶಿ ಶ್ರೀಕಷ್ಣಮೂರ್ತಿಯವರು ಉಪಸ್ಥಿತರಿದ್ದರು. ಇದಕ್ಕೆ ಮುನ್ನ ದೇವಾಡಿಗ ಸಮಾಜಭವನದ ಸಮೀಪದಲ್ಲೇ ಗೌಡಸಾರಸ್ವತ ಸಮಾಜದ ಶ್ರೀನಾಗಯಕ್ಷೀ ಮಹಾಸತೀ ಧರ್ಮದೇವೀ ಸಂಸ್ಥಾನದವರು ಕಟ್ಟಿಸುತ್ತಿರುವ ಕಲ್ಯಾಣಭವನಕ್ಕೆ ಸಂದರ್ಶನ ನೀಡಿ, ನಿರ್ಮಾಣ ಕಾರ್ಯವು ಶೀಘ್ರವಾಗಿ ನಡೆದು ಎಲ್ಲರಿಗೂ ಶ್ರೇಯಸ್ಸಾಗಲಿ ಎಂದು ಶ್ರೀಗಳು ಆಶೀರ್ವದಿಸಿದರು. ಮಂಜುನಾಥ ದೇವಾಡಿಗ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೆಂಕಟೇಶ ಪ್ರಭು ವಂದಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com