ರೈತ ದಿನ - ೨೦೧೪ ಆಚರಣೆ

ಕುಂದಾಪುರ : ಭಾರತದ ಇತಿಹಾಸವನ್ನು ನೋಡಿದಾಗ, ನಮಗೆ ಎದ್ದು ಕಾಣುವಂತಹ ವ್ಯಕ್ತಿತ್ವ ಚೌದುರಿ ಚರಣ್ ಸಿಂಘರವರದ್ದು, ಇಂದು ಭಾರತ ಕೃಷಿಯಲ್ಲಿ ಸ್ವಾವಲಂಬನೆ ಪಡೆಯಲು ಚರಣ ಸಿಂಘರ ದೂರದರ್ಶಿತ್ವದಿಂದ ಭಾರತದ ಕೃಷಿ ಏಳಿಗೆಗೆ ಮುಖ್ಯವಾಗಿ ಇಂದು ನಾವು ಆಹಾರ ಸಾಮಾಗ್ರಿಗಳನ್ನು ರಫ್ತು ಮಾಡಲು ಸಹಕಾರಿಯಾಯಿತು. ಇವರ ಈ ವ್ಯವಸ್ಥೆಯ ಸವಿ ನೆನಪಿಗಾಗಿ ಡಿಸೆಂಬರ್ ೨೩ನ್ನು ರೈತ ದಿನಾಚರಣೆ ನಾವು ಆಚರಿಸುತ್ತಿದ್ದೇವೆ ಎಂದು ಭಾರತೀಯ ಕಿಸನ್ ಸಂಘದ ಕೋಟೇಶ್ವರ ವಲಯದ ಅಧ್ಯಕ್ಷ ಎನ್. ಮೋಹನ್ ಆಚಾರ್ಯ ಹೇಳಿದರು
 ಅವರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ, ಕುಂದಾಪುರ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಮತ್ತು ಭಾರತೀಯ ಕಿಸಾನ್ ಸಂಘ ಕುಂದಾಪುರ ತಾಲೂಕು ಕೋಟೇಶ್ವರ ವಲಯದ ಸಹಕಾರದೊಂದಿಗೆ ರೈತ ದಿನಾಚರಣೆ - ೨೦೧೪ ನ್ನು ಕುಂದಾಪುರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಕಾಪು ದಿನಕರ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಕೆಂಚನೂರು ಸೋಮಶೇಖರ ಶೆಟ್ಟಿ, ಹಾಗೂ ಭಾರತೀಯ ಕಿಸಾನ್ ಸಂಘ ಕುಂದಾಪುರ ತಾಲೂಕಿನ ಅಧ್ಯಕ್ಷ ಸುಬ್ರಹ್ಮಣ್ಯ ಐತಾಳ್ ರೈತ ದಿನಾಚರಣೆ-೨೦೧೪ರ ಬಗ್ಗೆ  ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಜಯಲಕ್ಷ್ಮಿ ಹೆಗ್ಡೆ, ಚೈತನ್ಯ ಎಚ್.ಎಸ್ ಭಾಗವಹಿಸಿ ಕೃಷಿಕರ ಯಾವುದೇ ಸಮಸ್ಯೆಗಳಿಗೆ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇಲ್ಲಿ ಸಂಪರ್ಕಿಸಿದರೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರಾತ್ಯಕ್ಷಿತೆ ನೇಡಲಾಗುವುದು ಎಂದರು. ಡಾ.ಗಣೇಶ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಡಾ.ಸಂಜೀವ ಕ್ಯಾತಪ್ಪನವರ್ ಸಭೆಯ ಉದ್ದೇಶಗಳನ್ನು ವಿವರಿಸಿ ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ತಾಲೂಕು ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ವೆಂಕಟೇಶ್ ಹೆಬ್ಬಾರ್ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com