ಭೂಪರಿವರ್ತನೆ ವರದಿ ಸಡಲೀಕರಣಕ್ಕೆ ಆಗ್ರಹ

ಕುಂದಾಪುರ: ಭೂಪರಿವರ್ತನೆ ವರದಿ ಸಡಲೀಕರಣಗೊಳಿಸುವಂತೆ ಒತ್ತಾಯಿಸಿ ನಾಗರಿಕರು ಸೋಮವಾರ ಕುಂದಾಪುರಕ್ಕೆ ಭೇಟಿ ನೀಡಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆಯವರಿಗೆ ಮನವಿ ಸಲ್ಲಿಸಿದರು. 

ಹಿಂದಿನ ಜಿಲ್ಲಾಧಿಕಾರಿಯವರ ಆದೇಶದಂತೆ 0.15 ಎಕರೆವರೆಗೆ ವಾಸ್ತವ್ಯದ ಭೂಪರಿವರ್ತನೆ ಮಾಡಿಸಲು 11 ಇ ನಕ್ಷೆಯ ಅವಶ್ಯಕತೆ ಇಲ್ಲವಾಗಿತ್ತು. ಈಗಿನ ಜಿಲ್ಲಾಧಿಕಾರಿ 0.01 ಎಕರೆಗೂ ಕೂಡ 11 ಇ ನಕ್ಷೆ ನೀಡಬೇಕೆಂದು ಆದೇಶಿಸಿದ್ದಾರೆ. ಈ ನಕ್ಷೆ ಮಾಡಿಸಲು ಸುಮಾರು 6 ತಿಂಗಳು ಬೇಕಾಗುತ್ತದೆ. ಇದರಿಂದ ಬಡಜನರು ಬಹಳಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಮನೆ ನಿರ್ಮಿಸಲು, ಭೂಪರಿವರ್ತನೆ ಮಾಡಿಸಲು ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ. ಬಡವರಿಗೆ ಆಗುತ್ತಿರುವ ತೊಂದರೆ ಪರಿಹರಿಸುವ ನಿಟ್ಟಿನಲ್ಲಿ ಮೊದಲಿನ ಆದೇಶ ಮರುಜಾರಿಗೆ ತರಲು ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರ ಪರವಾಗಿ ಸಾಮಾಜಿಕ ಕಾರ್ಯಕರ್ತ ಸುಧಾಕರ್ ಒತ್ತಾಯಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com