ಗರ್ಲ್’ಫ್ರೆಂಡ್ ಎದುರು ಹುಡುಗರು ಹೇಳುವ ಪ್ರಮುಖ ಸುಳ್ಳುಗಳು

1) ಬೇರೆ ಹುಡುಗಿಯನ್ನ ನೋಡಲೇ ಇಲ್ಲ: ಗರ್ಲ್’ಫ್ರೆಂಡ್ ಜೊತೆಯಲ್ಲಿದ್ದರೂ ಎದುರಿಗೆ ಸುಂದರಿಯೊಬ್ಬಳು ಬಂದಾಗ ಹುಡುಗರು ದೃಷ್ಟಿಹಾಯಿಸುವುದು ಸಾಮಾನ್ಯ. ಇದಕ್ಕೆ ‘ಗರ್ಲ್’ಫ್ರೆಂಡ್ ಆಕ್ಷೇಪ ವ್ಯಕ್ತಪಡಿಸಿದರೆ ಹುಡುಗರು ಒಪ್ಪಿಕೊಳ್ಳೋದೇ ಇಲ್ಲ. ನೀನು ಹೇಳೋವರೆಗೂ ಆ ಹುಡುಗಿಯನ್ನ ನೋಡಲೇ ಇರಲಿಲ್ಲ ಎಂದು ಸಾಚಾತನ ಪ್ರದರ್ಶನ ಮಾಡುತ್ತಾರೆ.

2) ಸಿಗರೇಟ್ ಬಿಟ್ಟಿದ್ದೇನೆ.. ಅಥವಾ ಕಡಿಮೆ ಮಾಡಿದ್ದೇನೆ : ಹುಡುಗರು ಧೂಮಪಾನ ಮಾಡುವುದನ್ನ ಅವರ ಗರ್ಲ್’ಫ್ರೆಂಡ್’ಗಳಿಗೆ ಸಾಮಾನ್ಯವಾಗಿ ಇಷ್ಟವಾಗುವುದಿಲ್ಲ. ಸಿಗರೇಟ್ ವಿಷಯವಾಗಿ ಅವರನ್ನ ಸಿಕ್ಕಾಪಟ್ಟೆ ಗೋಳು ಹುಯ್ದುಕೊಳ್ಳುತ್ತಾರೆ. ಅದನ್ನ ಬಿಡೋವರೆಗೂ ‘ಅದನ್ನ’ ಕೊಡೋದಿಲ್ಲ ಅಂತಾರೆ. ಹೀಗಾಗಿ, ಹುಡುಗರು ತಮ್ಮ ಗರ್ಲ್’ಫ್ರೆಂಡ್’ಗೆ ಸಿಗರೇಟ್ ವಿಷಯದಲ್ಲಿ ಹೆಚ್ಚಾಗಿ ಸುಳ್ಳು ಹೇಳುತ್ತಾರೆ.

3) ನಿನ್ನ ಬಗ್ಗೆನೇ ಕನಸು ಕಾಣುತ್ತೇನೆ: ಹುಡುಗಿಯರಿಗೆ ಹೊಗಳಿಕೆ ಎಂದರೆ ತುಂಬಾ ಇಷ್ಟ. ಹುಡುಗರಿಗೆ ಈ ಸತ್ಯ ಗೊತ್ತಿರುತ್ತದೆ. ಹೀಗಾಗಿ, ತಮ್ಮ ಗರ್ಲ್’ಫ್ರೆಂಡ್ ಸಿಕ್ಕಾಗೆಲ್ಲಾ ಅವರು “ನಿನ್ನದೇ ನೆನಪು ದಿನವೂ ಮನದಲ್ಲಿ..” ಎಂದು ಹೇಳುತ್ತಿರುತ್ತಾರೆ. ನಿನ್ನೊಂದಿಗೆ ರೋಮಾನ್ಸ್ ಮಾಡುತ್ತಿರುವ ಕನಸು ಬಿತ್ತು… ತಬ್ಬಿಕೊಳ್ಳುವ ಅಭಿಲಾಷೆಯಾಯ್ತು ಎಂತೆಲ್ಲಾ ಪೂಸಿ ಬಿಡುತ್ತಾರೆ.

4) ಯಾವುದೋ ತುಕಾಲಿ ಕೆಲಸ ಅದು…ಕೆಲಸಕ್ಕೆ ಹೋಗುವ ಹುಡುಗರು ತಮ್ಮ ಗರ್ಲ್’ಫ್ರೆಂಡ್ ಎದುರು ಸಿಕ್ಕಾಪಟ್ಟೆ ಬ್ಯುಲ್ಡಪ್ ಕೊಟ್ಟಿರುತ್ತಾರೆ. ತಾವು ಕೆಲಸ ಮಾಡುವ ಸ್ಥಳದಲ್ಲೇ ಅವರೇ ಕಿಂಗ್ ಎಂದು ಹೇಳಿರುತ್ತಾರೆ. ಕೆಲಸದಿಂದ ಕಿತ್ತುಹಾಕಲ್ಪಟ್ಟರೂ ತಾನೇ ರಾಜೀನಾಮೆ ನೀಡಿ ಆ ಕೆಲಸಕ್ಕೆ ಬಾರದ ಕೆಲಸವನ್ನ ಬಿಟ್ಟುಬಿಟ್ಟೆ ಎನ್ನುತ್ತಾರೆ.

5) ನಿನ್ನ ಬಿಟ್ಟು ಕ್ಷಣವೂ ಇರಲು ಸಾಧ್ಯವಿಲ್ಲ..ಇದು ಬಹುತೇಕ ಹುಡುಗರು ಹೇಳುವ ಸುಳ್ಳು. ಗರ್ಲ್’ಫ್ರೆಂಡ್ ಹೊರಡುತ್ತಿದ್ದಂತೆ ಇವರು ಜೈಲಿಂದ ಬಿಡುಗಡೆಯಾದ ಹಕ್ಕಿಯಂತೆ ತಮ್ಮ ಫ್ರೆಂಡ್ಸ್ ಜೊತೆ ಸೇರಿಕೊಂಡು ಚೆನ್ನಾಗಿ ಪಾರ್ಟಿ ಮಾಡುತ್ತಾರೆ. ಆದರೆ, ಗರ್ಲ್’ಫ್ರೆಂಡ್ ಮತ್ತೆ ಸಿಕ್ಕಾಗ ಅದೇ ಬಿಟ್ಟಿರದ ಡೈಲಾಗ್ ಹೇಳುತ್ತಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com