ಬೀಜೋಪಚಾರ ಆಂದೋಲನ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿದ ಪ್ರಕಾಶ್ಚಂದ್ರ ಶೆಟ್ಟಿ

ನಾಗೂರು: ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಕುಂದಾಪುರ ಹಾಗೂ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ ಉಪ್ಪುಂದ, ಸಂಘ ಪ್ರಾಯೋಜಿತ  ರೈತ ಶಕ್ತಿ ರೈತ ಸೇವಾ ಒಕ್ಕೂಟ ಇವರ ಜಂಟಿ ಆಶ್ರಯದಲ್ಲಿ ೨೦೧೪-೧೫ನೇ ಸಾಲಿನ ಸಸ್ಯ ಸಂರಕ್ಷಣಾ ರಾಜ್ಯ ವಲಯ ಯೋಜನೆಯಡಿ ಬೀಜೋಪಚಾರ ಆಂದೋಲನ ಮಾಹಿತಿ ಕಾರ್ಯಕ್ರಮ ನಾಗೂರಿನ ಶ್ರೀ ಕೃಷ್ಣಲಲಿತ ಕಲಾಮಂದಿರದಲ್ಲಿ ಜರಗಿತು. ಮಾಹಿತಿ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಉದ್ಘಾಟಿಸಿದರು. ಕಿರಿಮಂಜೇಶ್ವರ ಗ್ರಾಂ. ಪಂ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕೃಷಿ ಕೂಲಿ ಕಾರ್ಮಿಕರ ಅಭಾವದ ಈ ದಿನಗಳಲ್ಲಿ ಕಡಿಮೆ ವೆಚ್ಚದ ಅಧಿಕ ಇಳುವರಿಗಳ ಬಗ್ಗೆ ಅಧ್ಯಯನ ನಡೆಸಿ ರೈತರಿಗೆ ಮಾಹಿತಿ ನೀಡಬೇಕಾದ ಅವಶ್ಯಕತೆ ಇದೆ ಹಾಗೂ ಈ ಮಾಹಿತಿ ಕಾರ್ಯಗಾರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಸಭಾ ಅಧ್ಯಕ್ಷತೆಯನ್ನು ವಹಿಸಿ ರೈತರನ್ನು ಉದ್ದೇಶಿಸಿ ಹೇಳಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ಮಹೇಂದ್ರ ಪೂಜಾರಿ, ಸಂಘದ ನಿರ್ದೇಶಕರುಗಳಾದ ಗುರುರಾಜ ಹೆಬ್ಬಾರ್, ಶ್ರೀಮತಿ ವಿಶಾಲಾಕ್ಷಿ ಪೂಜಾರ‍್ತಿ ಹಾಗೂ ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಮಮತಾ ವಿ. ಮಯ್ಯ ಮತ್ತು ಬಳಗ ಸೇರಿಸಿ ಬಂದಿರುವಂತಹ ರೈತ ಸದಸ್ಯರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅಂತೋನಿ ಮರಿಯ ಇಮಾನ್ಯುಯಲ್ ಎಂ ಜಂಟಿ ಕೃಷಿ ನಿರ್ದೇಶಕರು ಉಡುಪಿ ಇವರು ತೋಟಗಾರಿಕೆ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.  ಶ್ರೀ ಸಿ. ಎಲ್. ಚಂದ್ರಶೇಖರ ನಾಯಕ್ ಉಪ ಕೃಷಿ ನಿರ್ದೇಶಕರು ಉಡುಪಿ ಇವರು ಕೃಷಿಯಲ್ಲಿ ಸಮಗ್ರ ಪೋಶಕಾಂಶಗಳ ನಿರ್ವಹಣೆ, ಬೀಜೋಪಚಾರ, ಜೈವಿಕ ಕೃಷಿ, ಕಳೆ ನಾಶಕಗಳ ಕುರಿತು ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ವಿಷಯ ತಜ್ಞರಾದ ಶ್ರೀ ಎನ್. ಈ. ನವೀನ ಇವರು ಉತ್ತಮ ಬೀಜ, ಹಟ್ಟಿಗೊಬ್ಬರ ಸಮತೋಲನ ಪೋಶಕಾಂಶಗಳ ಬಳಕೆ, ಕಳೆ ನಿಯಂತ್ರಣ, ಸರಳ ಯಾಂತ್ರಿಕೃತ ಬೇಸಾಯದ ಕುರಿತು ಮಾಹಿತಿ ನೀಡಿದರು. ನಂತರ ರೈತರ ಪ್ರಶ್ನೆಗಳಿಗೆ ಉತ್ತರಿಸಿ ಸೂಕ್ತ ಸಲಹೆ ನೀಡಿದರು. 
ಕೃಷಿ ಹಾಗೂ ವಿಸ್ತರಣಾ ಅಧಿಕಾರಿಗಳಾದ ಗಾಯತ್ರಿ ಸ್ವಾಗತಿಸಿದರು. ಸಂಘದ ವಸೂಲಾತಿ ವ್ಯವಸ್ಥಾಪಕ ಹಾವಳಿ ಬಿಲ್ಲವ ಕಾರ್ಯಕ್ರಮವನ್ನು ನಿರೂಪಿಸಿದರು. ಕೃಷಿ ಇಲಾಖೆಯ ಪರಶುರಾಮ ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com