ಖಾರ್ವಿಭವನಕ್ಕೆ ಭೇಟಿ ನೀಡಿದ ಶೃಂಗೇರಿ ಶ್ರೀ ಭೇಟಿ

ಕುಂದಾಪುರ: ಕುಂದಾಪುರದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ತ್ರಾಸಿಯ ಕಡಲಕಿನಾರೆಯಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾದವರು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಖಾರ್ವಿ ಸಮುದಾಯ ಭವನಕ್ಕೆ ಶೃಂಗೇರಿ ಶ್ರೀಶಾರದಾಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀಭಾರತೀತೀರ್ಥ ಮಹಾಸ್ವಾಮೀಜಿ  ಸಂದರ್ಶನ ನೀಡಿದರು. ಮಹಾಸಭಾದ ಪದಾಧಿಕಾರಿಗಳಾದ ಕೆ.ಬಿ. ಖಾರ್ವಿ, ಉಮಾನಾಥ ಗಂಗೊಳ್ಳಿ, ವಸಂತ ಖಾರ್ವಿ, ಸಂಜೀವ ಖಾರ್ವಿ ಮೊದಲಾದವರು ಜಗದ್ಗುರುಗಳವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ, ಕಾಮಗಾರಿಯ ಪ್ರಗತಿಯನ್ನು ವಿವರಿಸಿದರು. ಭವ್ಯವಾದ ಭವನದ ನಿರ್ಮಾಣ ಕುರಿತು ಸಂತೋಷವ್ಯಕ್ತಪಡಿಸಿದ ಶ್ರೀಗಳವರು ಆದಷ್ಟು ಬೇಗನೆ ಈ ಭವನವು ಲೋಕಾರ್ಪಣೆಗೊಳ್ಳಲಿ ಎಂದು ಆಶೀರ್ವದಿಸಿದರು. 

ನಂತರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ನಾಗೂರು ವೀರಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀದೇವರ ದರ್ಶನ ಮಾಡಿದರು. ದೇವಾಲಯದ ಅಧ್ಯಕ್ಷ ಹೆರಿಯಣ್ಣ ಶೆಟ್ಟಿ, ವೈದಿಕರು ಮತ್ತು ಭಕ್ತರು ಪೂರ್ಣಕುಂಭ ಸ್ವಾಗತ ನೀಡಿ ಜಗದ್ಗುರುಗಳನ್ನು ಗೌರವಿಸಿದರು. ಎಲ್ಲರನ್ನೂ ಆಶೀರ್ವದಿಸಿ ಫಲಮಂತ್ರಾಕ್ಷತೆ ನೀಡಿದ ಜಗದ್ಗುರುಗಳು ಗೋವಾ ಮಾರ್ಗದಲ್ಲಿ ಹಳದಿಪುರಮಠಕ್ಕೆ ತೆರಳಿ ಮೊಕ್ಕಾಂ ಮಾಡಿದರು. 

ಕರ್ಣಾಟಕ ಬ್ಯಾಂಕ್ ಡಿಜಿಎಂ ಅವರಿಂದ ಶಂಗೇರಿ ಜಗದ್ಗುರುಗಳ ಸಂದರ್ಶನ: ಕರ್ಣಾಟಕ ಬ್ಯಾಂಕಿನ ಮುಂಬೈ ವಿಭಾಗದ ಜನರಲ್ ಮ್ಯಾನೇಜರ್ ಬೈಕಾಡಿ ನಾಗರಾಜ ರಾವ್ ಕುಂದೇಶ್ವರ ದೇವಸ್ಥಾನದ ಭಾರತೀತೀರ್ಥ ಕಪಾಭವನದಲ್ಲಿ ಮೊಕ್ಕಾಂ ಮಾಡಿದ್ದ ಶಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀಭಾರತೀತೀರ್ಥ ಮಹಾಸ್ವಾಮಿಗಳ ಸಂದರ್ಶನ ಮಾಡಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com