ಕೊಂಕಣಿ ಸಾಹಿತ್ಯ ಅಕಾಡೆಮಿ: ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ 2014ನೇ ಸಾಲಿನ ಕೊಂಕಣಿ ಸಾಹಿತ್ಯ, ಕೊಂಕಣಿ ಕಲೆ, ಕೊಂಕಣಿ ಜಾನಪದ ಎಂಬ ಮೂರು ವಿಭಾಗಗಳಿಗೆ ಅರ್ಹ ಹಿರಿಯ ಮಹನೀಯರ ಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.

ಈ ಬಗ್ಗೆ ಕೊಂಕಣಿ ಕ್ಷೇತ್ರದ ಸಾರ್ವಜನಿಕರು, ಸಂಘಸಂಸ್ಥೆಗಳು ತಮಗೆ ತಿಳಿದಿರುವ ಹಿರಿಯ ಮಹನೀಯರ ಹೆಸರನ್ನು ಅಕಾಡೆಮಿಗೆ ನೀಡಬಹುದು.

ಅರ್ಜಿ ಸಲ್ಲಿಸಲು ಇಚ್ಚಿಸುವವರು ಮೇಲೆ ತಿಳಿಸಿರುವ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಸಿದ್ದಪಡಿಸಿ, ಡಿ. 15ರ ಒಳಗೆ ಭರ್ತಿ ಮಾಡಿದ ಅರ್ಜಿಯನ್ನು ರಿಜಿಸ್ಟ್ರಾರ್‌, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಭಾಗ್‌ ಮಂಗಳೂರು-3 ಇವರಿಗೆ ಕಳುಹಿಸಿ ಕೊಡಬೇಕು.

ಜತೆಗೆ 3 ಪ್ರಕಾರದ ಕೊಂಕಣಿ ಪುಸ್ತಕಗಳಿಗೆ ಬಹುಮಾನ ನೀಡಲು ಅವಕಾಶ ಕಲ್ಪಿಸಲಾಗಿದೆ. 2014ರಲ್ಲಿ ಪ್ರಕಟಿಸಿರುವ ಕೊಂಕಣಿ ಪುಸ್ತಕಗಳ ಬಗ್ಗೆ ಲೇಖಕ, ಪ್ರಕಾಶಕರಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.

ಆದುದರಿಂದ 2014ರ ಜ. 1ರಿಂದ ಡಿ. 31ರೊಳಗೆ ಪ್ರಕಟಿಸಲಾದ ಪುಸ್ತಕಗಳನ್ನು ಮಾತ್ರ ಪುಸ್ತಕ ಬಹುಮಾನಕ್ಕೆ ಅಯ್ಕೆ ಮಾಡಲಾಗುವುದು. ಪುಸ್ತಕ ಬಹುಮಾನಕ್ಕೆ ಅಯ್ಕೆ ಮಾಡುವ ಪ್ರಕಾರಗಳು: ಭಾಷಾಂತರ, ಕೊಂಕಣಿ ಕವನ ಅಥವಾ ಲೇಖನ ಅಥವಾ ವಿಮರ್ಶೆ ಮತ್ತು ಕೊಂಕಣಿ ಸಣ್ಣಕತೆ ಅಥವಾ ಕಾದಂಬರಿ ಅಥವಾ ಅಧ್ಯಯನ ಕೃತಿ.

ಈ ಮೂರು ಪ್ರಕಾರಗಳಲ್ಲಿ ಒಂದೊಂದು ಕೃತಿಯನ್ನು ನಿಯಾಮಾನುಸಾರ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಇಚ್ಚಿಸುವವರು ಪುಸ್ತಕದ ಕನಿಷ್ಠ 4 ಪ್ರತಿಯೊಂದಿಗೆ ಅರ್ಜಿ ಕಳುಹಿಸಬಹುದು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಡಿ. 15. ಭರ್ತಿ ಮಾಡಿದ ಅರ್ಜಿ ಹಾಗೂ ಪುಸ್ತಕಗಳನ್ನು ರಿಜಿಸ್ಟ್ರಾರ್‌, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಭಾಗ್‌ ಮಂಗಳೂರು-3 ಇಲ್ಲಿಗೆ ಕಳುಹಿಸಬಹುದು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com