ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ

ನಾಗೂರು: ಹಿಂದೆ ಗುರುಕುಲದ ವ್ಯವಸ್ಥೆ ಇದ್ದಾಗ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಿಂತ ಸಂಸ್ಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ಇಂದು ಶಿಕ್ಷಣವೆ ಪ್ರಾಧಾನ್ಯತೆ ಪಡೆದು ಮಕ್ಕಳಿಗೆ ಸಿಗಬೇಕಾದ ಸಂಸ್ಕಾರದಲ್ಲಿ ಕೊರತೆ ಕಾಣುತ್ತಿದ್ದೇವೆ. ಸಂಸ್ಕಾರ ಇಲ್ಲದಿರುವುದರಿಂದಲೇ ಸಮಾಜದಲ್ಲಿ ಅಪರಾಧ ಕತ್ಯಗಳು ಸಂಭವಿಸುವುದು. ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರಕ್ಕೆ ಮಹತ್ವ ನೀಡಿ ತನ್ಮೂಲಕ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬೇಕು, ಎಂದು ನಿವತ್ತ ಶಿಕ್ಷಣಾಧಿಕಾರಿ ಬಿ ಶಂಕರನಾರಾಯಣ ಶಾಸ್ತ್ರಿಯವರು ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ಮಾತನಾಡಿದರು. 
      ಅತಿಥಿಯಾಗಿ ಆಗಮಿಸಿದ ನಟ ಜಾದೂಗಾರ ಓಂಗಣೇಶ್ ಮಾತನಾಡಿ, ಡಾಕ್ಟರ್ ಇಂಜಿನಿಯರ್ ಆಗುವುದೇ ಶಿಕ್ಷಣವಲ್ಲ ಮನುಷ್ಯ, ಮನುಷ್ಯನಾಗುವುದು ಅಷ್ಟೇ ಮುಖ್ಯ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಭಾವನೆಗೂ ಮಹತ್ವ ನೀಡೊಣಾ ಎಂದರು. 
  ಇದೇ ಸಂದರ್ಭದಲ್ಲಿ ಸಾಧಕರಾದ ವೈಕುಂಠ ಹೆಬ್ಬಾರ್ ಕುಂದಾಪುರ ಹಾಗೂ ಕಲಾವಿದ ಓಂಗಣೇಶ್ ಉಪ್ಪುಂದ ಇವರನ್ನು ಆರ್ ಕೆ ಸಂಜೀವ ರಾವ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. 
    ಸಂಸ್ಥೆಯ ಕಾರ್ಯದರ್ಶಿ ಹಿರಿಯ ಪತ್ರಕರ್ತ ಎಸ್ ಜನಾರ್ಧನ ಹಾಗೂ ಸಂಸ್ಥೆಯ ಟ್ರಸ್ಟಿ ಡಾ. ಅಶೋಕ ಕುಂದಾಪುರ ಉಪಸ್ಥಿತರಿದ್ದರು. 
    ಪ್ರಕಾಶ್ ರಾವ್ ಪ್ರಸ್ತಾವನೆಗೈದು ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ಬಿ ವಿಶ್ವೇಶ್ವರ ಅಡಿಗ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com