ಸಾಸ್ತಾನ ರೋಟರಿ ಪರಂಪರಾ ಕುಟುಂಬ ಕಲರವ

ಸಾಸ್ತಾನ: ರೋಟರಿ ಕ್ಲಬ್‌ ಹಂಗಾರಕಟ್ಟೆ, ಸಾಸ್ತಾನ ವತಿಯಿಂದ ಪರಂಪರಾ ಕುಟುಂಬ ಕಲರವ ಕಾರ್ಯಕ್ರಮ ಡಿ.21ರಂದು ಬ್ರಹ್ಮಾವರ ಮದರ್‌ ಪ್ಯಾಲೇಸ್‌ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಡಾ| ಹೇಮಂತ್‌ ಕುಮಾರ್‌ ಮಾತನಾಡಿ, ರೋಟರಿ ಸಂಸ್ಥೆ ಹಳ್ಳಿಯಿಂದ ದಿಲ್ಲಿವರೆಗೆ ಶಾಖೆಗಳನ್ನು ಹೊಂದಿದ್ದು, ಸಂಸ್ಥೆ ಸಾಮಜಿಕ ಪಿಡುಗುಗಳನ್ನು ನಿವಾರಿಸುವಲ್ಲಿ ಶ್ರಮಿಸಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಆನಂದ್‌ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಜಯಕರ್ನಾಟಕ ಸಂಘಟನೆಯ ಮಾಜಿ ಅಧ್ಯಕ್ಷ ಸತೀಶ್‌ ಪೂಜಾರಿಯವರನ್ನು ಕ್ಲಬ್‌ನ ನೂತನ ಸದಸ್ಯರಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು ಹಾಗೂ 2015-16ನೇ ಸಾಲಿನ ಅಧ್ಯಕ್ಷರಾಗಿ ಶ್ರೀಪತಿ ಅಧಿಕಾರಿ ಹಾಗೂ ಕಾರ್ಯದರ್ಶಿಯಾಗಿ ಚಂದ್ರ ನಾಯರಿ ಅವರನ್ನು ಮತ್ತು 2016-17ನೇ ಸಾಲಿನ ಅಧ್ಯಕ್ಷರಾಗಿ ಮುರುಳಿಧರ ನಾಯರಿ ಮತ್ತು ಕಾರ್ಯದರ್ಶಿಯಾಗಿ ವೆಂಕಟೇಶ ಭಟ್‌ ಆಯ್ಕೆಯಾದರು.

ಸಹಾಯಕ ಗವರ್ನರ್‌ ದಿನೇಶ ಅತ್ರಾಡಿ, ವಲಯ ಪ್ರತಿನಿಧಿ ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ರಾಜಾರಾಮ್‌ ಐತಾಳ ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com