ಸಿರಾತ್-ಇ- ಮುಸ್ತಕೀಂ ಮದರಸದ ವಾರ್ಷಿಕೋತ್ಸವ & ಇಸ್ಲಾಮಿಕ್ ಸಮಾವೇಶ

ಶಿರೂರು: ಎಲ್ಲ ಸಂಬಂಧಗಳಿಗಿಂತ ಪತಿ- ಪತ್ನಿ ಸಂಬಂಧ ಶ್ರೇಷ್ಠವಾದುದು. ಮನೆಯಲ್ಲಿ ಶಾಂತಿ, ನೆಮ್ಮದಿ ಹಾಗೂ ಹೊಂದಾಣಿಕೆಯ ಜೀವನ ಸಾಗಿಸುವುದು ಪತ್ನಿಯ ಕರ್ತವ್ಯವಾದರೆ, ಪತಿಯು ತನ್ನ ಪತ್ನಿ ಮತ್ತು ಮಕ್ಕಳ ಹಿತವನ್ನು ಕಾಪಾಡುವುದರ ಜತೆಗೆ ಅವರ ಆಶೋತ್ತರಗಳನ್ನು ಈಡೇರಿಸಬೇಕು. ಜೀವನದಲ್ಲಿ ಸುಖ- ದುಃಖಗಳನ್ನು ಸಮನಾಗಿ ಹಂಚಿಕೊಂಡು ಬಾಳಬೇಕು. ಗುಲಾಬಿ ಹೂವಿನಲ್ಲಿ ಮುಳ್ಳಿರುವ ಹಾಗೆ ಹೂವಿನ ಸೌಂದರ್ಯ ಮತ್ತು ಸುಗಂಧವನ್ನು ಬಯಸುವವರು ಮುಳ್ಳನ್ನು ಸಹಿಸಿಕೊಳ್ಳಬೇಕು ಎಂದು ಕಾರವಾರ ಜಿಲ್ಲಾ ಅಮೀರ್ ಮಜ್ಲಸೇ ಉಲೇಮಾ ಅಹ್ಲೆ ಹದೀಸ್ ಅಧ್ಯಕ್ಷ ಅಬ್ದುಲ್ ಗಪೂರ್ ಜಾಮಿಯಿ ಹೇಳಿದರು. 

ಶಿರೂರು ಮುಸ್ಲಿಂ ಮೊಹಲ್ಲಾದ ಜಾಮಿಯ ದರುಸ್ಸುನ್ನ ಮೈದಾನದಲ್ಲಿ ನಡೆದ ಸಿರಾತ್-ಇ- ಮುಸ್ತಕೀಂ ಮದರಸದ ವಾರ್ಷಿಕೋತ್ಸವ, ಕರ್ನಾಟಕ ಮತ್ತು ಗೋವಾ ರಾಜ್ಯಗಳ ಇಸ್ಲಾಮಿಕ್ ಸಮಾವೇಶದಲ್ಲಿ ಉಪನ್ಯಾಸ ನೀಡಿದರು. 

ಕುಟುಂಬ ಪದ್ಧತಿಯಲ್ಲಿ ಪತಿ, ಪತ್ನಿಯರು ಸಹನೆ ಹಾಗೂ ಹೊಂದಾಣಿಕೆಯಿಂದ ಜೀವನ ನಡೆಸುವುದರಿಂದ ಆ ಸಂಸಾರದಲ್ಲಿ ಶಾಂತಿ, ನೆಮ್ಮದಿಯಿಂದ ಬಾಳಲು ಸಾಧ್ಯ. ಅಲ್ಲಾಹುನ ನಿಯಮವು ಇದೇ ಆಗಿದ್ದು, ಇದನ್ನು ಪ್ರತಿಯೊಬ್ಬರೂ ಇದನ್ನು ಪಾಲಿಸಬೇಕು ಎಂದರು. ಮಾರ್ಕ್‌ಝಿ ಜಮಾತ್-ಇ-ಅಹ್ಲೆ ಹದೀಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಶೇಖ್ ಅನಿಸರ್ ರೆಹೆಮಾನ್ ಉಮ್ರಿ ಮದನಿ ಅಧ್ಯಕ್ಷತೆ ವಹಿಸಿದ್ದರು. 

ಮೆಕ್ಕಾದ ಉಮ್ಮುಲ್ ಕ್ವಾರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಸಿವುಲ್ಲಾ ಮಹಮ್ಮದ್ ಅಬ್ಬಾಸ್ ಮದನಿ, ಬನಾರಸ್ ಅಬ್ದುಲ್ಲಾ ಸವೂದ್ ಸಲಫಿ, ತಮಿಳುನಾಡು ಜಮಾತ್-ಇ-ಅಹ್ಲೆ ಹದೀಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಆರ್.ಕೆ. ನೂರ್ ಮಹಮ್ಮದ್ ಮದನಿ, ಶಿರೂರು ಇಸ್ಲಾಮಿಕ್ ವೆಲ್‌ಫೇರ್ ಸೊಸೈತಿಯ ಅಧ್ಯಕ್ಷ ಅತೀಫ್ ಹುಸೈನ್ ಉಡುಪಿ, ಗೋವಾದ ಹಫೀಜ್ ಝುಬೈರ್ ಮದನಿ, ಅಬ್ದುಲ್ ವಾಹಬ್ ಜಮಾಯಿ, ಅಸ್ಲಂ ಖಾನ್ ಸಾಹೇಬ್ ಉಪಸ್ಥಿತರಿದ್ದರು ಯುಎಇಯ ಝಫ್ರುಲ್ ಹಸ್ಸನ್ ಸಲಫಿ ಮದನಿ, ಉಮ್ರಾಬಾದ್‌ನ ಅಬ್ದುಲ್ ಅಝೀಂ ಉಮ್ರಿ ಮದನಿ, ಮಹಾರಾಷ್ಟ್ರದ ಅಬು ರಿಝ್ವಾನ್ ಮುಹಮ್ಮದಿ, ಬೆಂಗಳೂರಿನ ಅಬ್ದುಲ್ ಹಸೀಬ್ ಉಮ್ರಿ ಮದನಿ, ಅಬ್ದುಲ್ ವಕೀಲ್ ಮದನಿ ಉಪನ್ಯಾಸಕರಾಗಿ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಏಳು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಈ ಕಾರ್ಯಕ್ರಮದಲ್ಲಿ ಸೇರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com