ಹಿಂದೂ ಧರ್ಮಜಾಗೃತಿ ಸಭೆ

ಸಿದ್ಧಾಪುರ: ಇಲ್ಲಿನ ರಂಗನಾಥ ಸಭಾಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಧರ್ಮಜಾಗೃತಿ ಸಭೆ ಜರುಗಿತು. ಬೈಲೂರು ರಾಮಕಷ್ಣ ಆಶ್ರಮದ ಶ್ರೀ ವಿನಾಯಕಾನಂದ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ ಮಾನವನ ವಿಕಾಸಕ್ಕೆ ಬೇಕಾದ ವಿಷಯ ಭಾರತೀಯ ಸಂಸ್ಕೃತಿಯನ್ನು ಬಿಟ್ಟು ಬೇರೆ ಎಲ್ಲಿಯೂ ಇಲ್ಲ. ವಿಶ್ವದಲ್ಲಿ ಒಂದೇ ಒಂದು ಧರ್ಮವಿದೆ. ಅದು ಸನಾತನ ಹಿಂದೂ ಧರ್ಮ. ಉಳಿದುದೆಲ್ಲವು ಮತ. ಏಕೆಂದರೆ ಪರಿವರ್ತನಾ ಶೀಲ ಸಮಾಜಕ್ಕೆ ಶಾಶ್ವತ ತತ್ವ ಕೊಡುವಂತದ್ದು ಧರ್ಮ. ಉಳಿದದ್ದು ನ್ಯಾಯ. ಇಂದು ಜಗತ್ತು ದುಃಖ, ಅಸಮಾನತೆಗಳಿಂದ ಕೂಡಿದೆ. ನಾವು ಸಂಸ್ಕೃತಿಯಿಂದ ವಿಮುಖರಾಗಿದ್ದೇವೆ. ಕೇವಲ ಶಾಶ್ವತ ತತ್ವ ಕೊಡುವಂತಹ ಸನಾತನ ಹಿಂದೂ ಧರ್ಮ ಸಂಸ್ಕೃತಿಯ ಪಾಲನೆಯಿಂದ ನಾವು ನಮ್ಮ ಜೀವನ ಆನಂದಮಯಗೊಳಿಸಬಹುದು ಎಂದು ಹೇಳಿದರು. ಇಸ್ಕಾನ್‌ನ ಗೋವಿಂದದಾಸ್ ಮಾತನಾಡಿ ಮಂಗಳೂರಿನಲ್ಲಿ ಒಬ್ಬ ಲೇಖಕಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಇತಿಹಾಸ ಇದೆ, ಹಿಂದೂ ಧರ್ಮಕ್ಕೆ ಇತಿಹಾಸ ಇಲ್ಲ ಎಂದು ಹೇಳುತ್ತಾರೆ. ಅದು ಅವರ ಅವಿವೇಕತನ. ಹಿಂದೂ ಧರ್ಮಕ್ಕೆ ಹುಟ್ಟು ಮತ್ತು ಸಾವು ಎರಡೂ ಇಲ್ಲ, ಅದು ಸನಾತನ, ನಿತ್ಯನೂತನ ಎಂದರು. ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕದ ಸಮನ್ವಯಕಾರ ಗುರುಪ್ರಸಾದ್ ಮಾತನಾಡಿ, ಧರ್ಮಸಭೆಗಳು ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಜಾಗತಿ ಮೂಡಿಸುತ್ತಿವೆ ಎಂದರು. ವೇದಮಂತ್ರ ಪಠಣದಿಂದ ಸಭೆ ಆರಂಭಗೊಂಡಿತು. ಪುರೋಹಿತರಾದ ಬ್ರಹ್ಮಶ್ರೀ ಮಂಜುನಾಥ ಬಾಯಿರಿ ಮತ್ತು ವಿದ್ವಾನ್ ಗಣೇಶ ಅಡಿಗ ವೇದಮಂತ್ರ ಪಠಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com