ಸುರಭಿ ಬೈಂದೂರು: ನೂತನ ಪದಾಧಿಕಾರಿಗಳ ಆಯ್ಕೆ

ಬೈಂದೂರು: ಕಳೆದ 15 ವರ್ಷಗಳಿಂದ ಗ್ರಾಮೀಣ ಕಲಾಸೇವೆ (ನೃತ್ಯ-ನಾಟಕ-ಸಂಗೀತ-ಯಕ್ಷಗಾನ-ವಾದ್ಯ-ಜಾದೂ) ಯನ್ನು ನಿರ್ವಹಿಸುತ್ತಿರುವ ಸಾಂಸ್ಕ್ರತಿಕ ಮತ್ತು ಸಾಹಿತ್ಯ ಸೇವಾ ಸಂಸ್ಥೆಯಾದ ಸುರಭಿ (ರಿ) ಬೈಂದೂರು ಇದರ ನೂತನ ಸಾಲಿನ ಅಧ್ಯಕ್ಷರಾಗಿ ಬೈಂದೂರು ವಿ. ಎಸ್. ಎಸ್. ಸಂಘದ ಉದ್ಯೋಗಿ ಶಿವರಾಮ ಕೊಠಾರಿ ಹಾಗೂ ಕಾರ್ಯದರ್ಶಿಯಾಗಿ ರೈಲ್ವೆ ಇಲಾಖೆಯ ಉದ್ಯೋಗಿ  ಲಕ್ಷಣ ಕೆ. ಕೊರಗ ಸರ್ವಾನುಮತದಿಂದ ಆಯ್ಕೆಯಾದರು.
  ಗೌರವಾದ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ, ಉಪಾದ್ಯಕ್ಷ ಚಂದ್ರಶೇಖರ ಬೈಲೂರ, ಖಜಾಂಚಿ ಸವಿತಾ ಮಯ್ಯ ವ್ಯವಸ್ಥಾಪಕರಾಗಿ ಕೃಷ್ಣಮೂರ್ತಿ ಉಡುಪ, ಸುಧಾಕರ ಪಿ ಬೈಂದೂರು, ಗಣಪತಿ ಹೋಬಳಿದಾರ್, ಜಿ. ತಿಮ್ಮಪ್ಪಯ್ಯ ಹಾಗೂ ಸಲಹೆಗಾರ ಉಪ್ಪುಂದ ಓಂಗಣೇಶ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸತ್ಯವತಿ ಮಯ್ಯ, ಭಾನುಮತಿ, ಪವಿತ್ರ, ವಿದ್ಯಾ ಆಯ್ಕೆಯಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Surabhi Byndoor, Surabi Byndoor Sudakar P



ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com