ಯೋಗದಿಂದ ಮನೋಬಲ ವೃದ್ಧಿ: ಬಿ.ಅಪ್ಪಣ್ಣ ಹೆಗ್ಡೆ

ಬಸ್ರೂರು: ಆಸೆ-ದುರಾಸೆಗೆ ಒಳಗಾಗಿ ಬಂಧಮುಕ್ತ ಜೀವನದಿಂದ ಹೊರಬಂದು ದೈಹಿಕಬಲ ಮತ್ತು ಆರ್ಥಿಕ ಶಕ್ತಿಗಿಂತ ಮನೋಬಲ ವದ್ಧಿಸಿ, ನಮ್ಮನ್ನು ನಾವು ಒಪ್ಪಿಕೊಂಡು ಮುನ್ನೆಡೆದಾಗ ಸದ್ಬಾವ-ಸದ್ಗುಣ, ಮಾನವೀಯ ಮೌಲ್ಯಗಳು ನಮ್ಮಲ್ಲಿ ಬೆಳೆದು ರೋಗ ಮುಕ್ತ ಸದಢ ಸಮಾಜ ನಿರ್ಮಿಸಿಕೊಳ್ಳಲು ಸಾಧ್ಯ. ಯೋಗ ಇದಕ್ಕೆ ಸಹಕಾರಿ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು. 

ಅವರು ಉಳ್ಳೂರು ಶ್ರೀ ಕಾರ್ತೀಕೇಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಾವರ ಆರೋಗ್ಯ ಮತ್ತು ಸಾಂಸ್ಕೃತಿಕ ವಿಕಾಸ ಕೇಂದ್ರ, ಕುಂದಾಪುರ ಜ್ಞಾನ ವಿಕಾಸ ಯೋಗ ತರಬೇತಿ ಕೇಂದ್ರ ಆಶ್ರಯದಲ್ಲಿ ಜರುಗಿದ ಕುಟುಂಬೋತ್ಸವ ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕುಂದಾಪುರ ಕಾರ್ತಿಕ್ ಸ್ಕ್ಯಾನಿಂಗ್ ಸೆಂಟರ್‌ನ ಡಾ.ಬಿ.ವಿ.ಉಡುಪ ಉದ್ಘಾಟಿಸಿದರು. ಕುಂದಾಪುರ ಸ.ಪ.ಪೂ ಕಾಲೇಜಿನ ಸಂಸ್ಕೃತ ವಿದ್ವಾನ್ ಮಾದವ ಅಡಿಗ ಶುಭಾಂಶನೆಗೈದರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ‌್ಯದರ್ಶಿ ರಾಜೇಂದ್ರ ಶೆಟ್ಟಿಗಾರ, ಹಿರಿಯ ಯೋಗ ಸಾಧಕ, ಹೆಮ್ಮಾಡಿ ಜನತಾ ಪ.ಪೂ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕ ಸುಧಾಕರ್ ವಕ್ವಾಡಿ ಉಪಸ್ಥಿತರಿದ್ದರು. 

ಮುಖ್ಯ ಯೋಗ ತರಬೇತುದಾರೆ ಮುಕ್ತಾ ಮಾತಾಜಿ ಮಾರ್ಗದರ್ಶನ ನೀಡಿದರು. 80 ನೇ ಹುಟ್ಟು ಹಬ್ಬ ಆಚರಿಸಿ ಕೊಳ್ಳುತ್ತಿರುವ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರನ್ನು ಜ್ಞಾನವಿಕಾಸ ಯೋಗತರಬೇತಿ ಕೇಂದ್ರ ವತಿಯಿಂದ ಹಿರಿಯ ಯೋಗ ಸಾಧಕ ಸಟ್ವಾಡಿ ಅನಿಲ್ ಕುಮಾರ್ ಶೆಟ್ಟಿ, ಪ್ರಭಾಕರ್ ಐತಾಳ್, ಆವರ್ಸೆ ರತ್ನಾಕರ್ ಶೆಟ್ಟಿ, ವಿದ್ಯಾಧರ್ ಪ್ರಭು, ರಾಘವೇಂದ್ರ ಪ್ರಭು ಗೌರವಿಸಿದರು. ಹಿರಿಯ ಯೋಗ ಸಾಧಕರನ್ನು ಗೌರವಿಸಲಾಯಿತು. ಗ್ರಾಮ ಪಂ.ಸದಸ್ಯ ರಾಮಚಂದ್ರ ಶೇರಿಗಾರ್ ಸ್ವಾಗತಿಸಿದರು. ಗೋಪಾಡಿ ಮೆಸ್ಕಾಂ ಜೂ. ಎಂಜಿನಿಯರ್ ಬಾಬಣ್ಣ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶೋಕ್ ಪೂಜಾರಿ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com