ಎಸ್.ವಿ. ಉದಯಕುಮಾರ ಶೆಟ್ಟಿಯವರ ಅಭಿನಂದನೆ

ಕುಂದಾಪುರ: ಯಕ್ಷಗಾನದಲ್ಲಿ ಚಂಡೆ ಬಾರಿಸುವವರು ಅಧಿಕವಾಗಿರಬಹುದು. ಆದರೆ ಚಂಡೆ ನುಡಿಸುವವರು ವಿರಳ. ಬಹಳ ಹಿಂದೆ ಕೆಮ್ಮಣ್ಣು ಆನಂದ, ಕಿಟ್ಟು, ವೀರಭದ್ರನಾಯ್ಕ್ ರಂತಹ ಕಲಾವಿದರು ಚಂಡೆ ನುಡಿಸುವುದರಲ್ಲಿ ನಿಸ್ಸೀಮರಾಗಿದ್ದರು. ಇಂದಿನ ಕಾಲಘಟ್ಟದಲ್ಲಿ ರಾಮಕಷ್ಣ ಮಂದಾರ್ತಿ, ಕೋಟ ಶಿವಾನಂದ, ಮಾಧವ ಸಾಲಿಗ್ರಾಮ ಚಂಡೆ ನುಡಿಸುವವರ ಸಾಲಿನಲ್ಲಿ ಸೇರುತ್ತಾರೆ. ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಶ್ರೀಧರ ಹಂದೆ ಹೇಳಿದರು. 

ಇಲ್ಲಿನ ರೋಟರಿ ಕಲಾಮಂದಿರದಲ್ಲಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಕೇಂದ್ರ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ಖ್ಯಾತ ಚಂಡೆವಾದಕ ರಾಮಕಷ್ಣ ಮಂದಾರ್ತಿ ಹಾಗೂ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಸ್.ವಿ. ಉದಯಕುಮಾರ ಶೆಟ್ಟಿಯವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

ರಾಮಕೃಷ್ಣ ಮಂದಾರ್ತಿ ತೆಂಕು, ಬಡಗು ಎರಡು ಶೈಲಿಯಲ್ಲಿ ನುರಿತ ಅಪರೂಪದ ಕಲಾವಿದ. ಇಂತಹ ಕಲಾವಿದರನ್ನು ಗುರುತಿಸಿ ಗೌರವಿಸುವುದರಿಂದ ಯಕ್ಷಗಾನದ ಘನತೆ ಹೆಚ್ಚುತ್ತದೆ. ಅದೇ ರೀತಿ ಎಸ್.ವಿ. ಉದಯಕುಮಾರ ಶೆಟ್ಟಿ ಯಕ್ಷಗಾನ ದಲ್ಲಿಯೇ ಬಹಳ ಅಪರೂಪದ ವ್ಯಕ್ತಿತ್ವ. ಯಕ್ಷಗಾನದ ಸರ್ವಮಜಲುಗಳ ಅರಿವು ಇರುವ ಇವರನ್ನು ಅಕಾಡೆಮಿ ಗುರುತಿಸಿ ರುವುದು ಯೋಗ್ಯವಾದುದು ಎಂದು ನುಡಿದರು. 

ರಾಮಕೃಷ್ಣ ಮಂದಾರ್ತಿಯವರಿಗೆ ಯಕ್ಷಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್.ವಿ. ಉದಯ ಕುಮಾರ ಶೆಟ್ಟಿಯವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಬೆಂಗಳೂರು ಯಕ್ಷಾಂಗಣ ಟ್ರಸ್ಟ್‌ನ ವೀಣಾ ಮೋಹನ್, ತೇಜೇಶ್ವರ ರಾವ್, ಸುದರ್ಶನ ಉರಾಳ ಉಪಸ್ಥಿತರಿದ್ದರು. ಲಂಬೋದರ ಹೆಗಡೆ ಸ್ವಾಗತಿಸಿದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com