ಅಮಾಸೆಬೈಲಿನಲ್ಲಿ ಹಳದಿ ಮಳೆ

ಕುಂದಾಪುರ: ತಾಲೂಕಿನ ಪಶ್ಚಿಮಘಟ್ಟದ ತಪ್ಪಲು ಪ್ರದೇಶ ಅಮಾಸೆಬೈಲು ಎಂಬಲ್ಲಿ ಬೆಳಗ್ಗೆ ಹಳದಿ ಮಳೆ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ. ಮಳೆ ಹನಿ ಹಳದಿ ಬಣ್ಣದಿಂದ ಕೂಡಿರುವುದಲ್ಲದೆ ಹನಿ ಬಿದ್ದ ಜಾಗದಲ್ಲಿ ಹಳದಿ ಚುಕ್ಕೆಗಳು ಕಾಣಿಸಿರುವುದು ಜನರ ಕುತೂಹಲಕ್ಕೆ ಕಾರಣವಾಗಿದೆ. 

ಬೆಳಗ್ಗೆ 7ರ ಸುಮಾರಿಗೆ ಮಳೆ ಮೊದಲು ಮಳೆ ಬಿದ್ದ ಪ್ರದೇಶದಲ್ಲಿ ಹಳದಿ ಚುಕ್ಕೆಗಳು ಮೂಡಿದ್ದವು. ಚುಕ್ಕೆಯನ್ನು ಬೆರಳಿನಿಂದ ತಿಕ್ಕಿದಾಗ ಪೌಡರ್ ರೀತಿ ಗೋಚರಿಸಿದೆ. ಈ ವಿಚಿತ್ರ ವಿದ್ಯಮಾನದಿಂದ ಆಶ್ಚರ್ಯಪಟ್ಟ ಜನರು ಬೆಳಗ್ಗೆ 11ರ ಸುಮಾರಿಗೆ ಮರಳಿ ಘಟಿಸಿದಾಗ ಆತಂಕಗೊಂಡಿದ್ದಾರೆ. ಅಮಾಸೆಬೈಲು ಪೇಟೆ ಪ್ರದೇಶದ ಸರಿಸುಮಾರು ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಳದಿ ಮಳೆಯಾಗಿದೆ. ಮನೆಯ ಸಿಮೆಂಟ್ ಶೀಟ್‌ಗಳು, ತಗಡಿನ ಶೀಟುಗಳು, ರಿಕ್ಷಾ, ಬಸ್‌ತಂಗುದಾಣ, ಮರಗಿಡಗಳ ಮೇಲೆ ಹಳದಿ ಬಣ್ಣದ ಚುಕ್ಕೆ(ಹನಿ) ಗೋಚರಿಸಿದೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com