ಡಿ.25: ಮಲ್ಪೆಯಲ್ಲಿ ಯುವಸಂಗಮ

ಉಡುಪಿ: ವಾಜಪೇಯಿ ಜನ್ಮದಿನಾಚರಣೆ ಪ್ರಯುಕ್ತ ಮಲ್ಪೆಯಲ್ಲಿ ಸಾಂಸ್ಕೃತಿಕ - ಕ್ರೀಡಾ ಕಲರವ ಬೃಹತ್‌ 'ಯುವ ಸಂಗಮ' ಡಿ. 25ರ ಅಪರಾಹ್ನ 3ಕ್ಕೆ ಮಲ್ಪೆ ಕಡಲತೀರದಲ್ಲಿ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುರುಷರು, ಮಹಿಳೆಯರಿಗೆ ವಾಜಪೇಯಿ ಚಿತ್ರ ಬಿಡಿಸುವ ಸ್ಪರ್ಧೆ, ಹಗ್ಗಜಗ್ಗಾಟ, ಕಬಡ್ಡಿ, ದೇಹದಾಡ್ಯì ಪ್ರದರ್ಶನ, ಪ್ರಸಿದ್ಧ ತಂಡಗಳಿಂದ ಸಾಂಸ್ಕೃತಿಕ ವೈಭವ, ಸಾರ್ವಜನಿಕ ರಸಪ್ರಶ್ನೆ ಸ್ಪರ್ಧೆ ನಡೆಯಲಿವೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು ಎಂದರು.

ಸಂಸದರಾದ ಬಿ.ಎಸ್‌. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್‌ ಕಟೀಲು, ಪ್ರತಾಪಸಿಂಹ, ರಾಜ್ಯ ಯುವಮೋರ್ಚಾ ಅಧ್ಯಕ್ಷ ಮುನಿರಾಜು, ಶಾಸಕರು, ಮಾಜಿ ಶಾಸಕರು ಪಾಲ್ಗೊಳ್ಳುವರು. ಹಿರಿಯ ನಾಯಕರನ್ನು ಕರೆತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಂಗಳೆ ತಿಳಿಸಿದರು.

ಜನಸಂಘದ ಕಾಲದ ಹಿರಿಯ ಮುಖಂಡ ದೇವದಾಸ ಪೈ, ಪ್ರಸಿದ್ಧ ಕಬಡ್ಡಿ ಪಟು ಮಮತಾ ಪೂಜಾರಿ, ಪ್ರಸಿದ್ಧ ಈಜು ಪಟು ಗೋಪಾಲ ಖಾರ್ವಿ, ಬೀಡಿನಗುಡ್ಡೆ ಶವಸಂಸ್ಕಾರ ಕೇಂದ್ರದ ನಿರ್ವಾಹಕಿ ವನಜಾ ಪೂಜಾರಿ, ಕಾಪುವಿನ ಸಮಾಜ ಸೇವಕ ಸುರೇಶ ಶೆಟ್ಟಿ ಅವರನ್ನು ಸಮ್ಮಾನಿಸಲಾಗುವುದು. ಕೊಡವೂರು ನೃತ್ಯನಿಕೇತನದವರಿಂದ ನೃತ್ಯಸಿಂಚನ, ಮೂಡಬಿದಿರೆ ಟಾಲೆಂಟ್‌ ಗ್ರೂಪ್‌ನಿಂದ ಜನಪದ ನೃತ್ಯ, ಪ್ರಸಿದ್ಧ ಕಲಾವಿದ ಪ್ರಶಾಂತ ಶೆಟ್ಟಿಯವರಿಂದ ವಾಜಪೇಯಿ ತೈಲವರ್ಣಚಿತ್ರ ರಚನೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2.5 ಲಕ್ಷ ಸದಸ್ಯರ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಎಂದರು. ಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕ ಯಶಪಾಲ್‌ ಸುವರ್ಣ, ಸಹಸಂಚಾಲಕ ರಂಜಿತ್‌ ಸಾಲ್ಯಾನ್‌, ಜಿಲ್ಲಾ ವಕ್ತಾರ ಮಟ್ಟಾರ್‌ ರತ್ನಾಕರ ಹೆಗ್ಡೆ, ಪ್ರ. ಕಾರ್ಯದರ್ಶಿ ನವೀನ್‌ ಶೆಟ್ಟಿ, ಸಂಧ್ಯಾ ರಮೇಶ್‌, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com