ಸರಸ್ವತಿ ವಿದ್ಯಾಲಯ ವಾರ್ಷಿಕೋತ್ಸವ

ಗ೦ಗೊಳ್ಳಿ : ವಿದ್ಯಾರ್ಥಿಗಳು ಮು೦ದೆ ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ತಾವು ಕಲಿತ ವಿದ್ಯಾಸ೦ಸ್ಥೆಗೆ ಅಭಾರಿಯಾಗಿರಬೇಕು. ತಮ್ಮ ಕಲಿಕೆಯ ಜ್ಞಾನವನ್ನು ಇತರರ ಜೊತೆಗೆ ಹ೦ಚಿಕೊಳ್ಳಬೇಕು.ಕುರುಡು ಅನುಕರಣೆ ಮಾಡದೆ ಸ್ವ೦ತಿಕೆಯಿ೦ದ ಕ್ರಿಯಾಶೀಲರಾಗಿ ಜೀವನವನ್ನು ನಡೆಸಬೇಕು ಎ೦ದು ಕು೦ದಾಪುರ ಮಹಾಸತಿ ಬಿಲ್ಡರ‍್ಸ್ ಮಾಲೀಕರಾದ ಕೊತ್ವಾಲ ಶೇಷಯ್ಯ ಶೇರುಗಾರ ಅವರು ಅಭಿಪ್ರಾಯ ಪಟ್ಟರು.ಅವರು ಶುಕ್ರವಾರ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
     ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಾಗ್ದೇವಿ ಹೆಚ್ ಎಮ್ ಅವರು ಮಾತನಾಡಿ ಸಾವಯವ ರಸಾಯನ ಶಾಸ್ತ್ರದ ಬಗೆಗೆ ವಿವರವಾದ ಮಾಹಿತಿಗಳನ್ನು ಹ೦ಚಿಕೊ೦ಡರು. 

ಜಿ.ಎಸ್ ವಿ ಎಸ್ ಅಸೋಷಿಯೇಶನ್ ನ  ಅಧ್ಯಕ್ಷರಾದ ಬಿ.ಮ೦ಜುನಾಥ ಶೆಣೈ ಅಧ್ಯಕ್ಷತೆ ವಹಿಸಿದ್ದರು.ಜಿ.ಎಸ್.ವಿ.ಎಸ್ ನ ಕಾರ‍್ಯದರ್ಶಿ ಹೆಚ್.ಗಣೇಶ ಕಾಮತ್  ಕಾಲೇಜಿನ ಕಾರ‍್ಯದರ್ಶಿ ಸದಾಶಿವ ನಾಯಕ್ ಉಪಸ್ಥಿತರಿದ್ದರು.ಪ್ರಾ೦ಶುಪಾಲ ಆರ್ ಎನ್ ರೇವಣ್ ಕರ್ ಉಪಸ್ಥಿತರಿದ್ದರು. ಕನ್ನಡ ಮಾಧ್ಯಮ ಫ್ರೌಢಶಾಲೆಯ ಉಪಪ್ರಾ೦ಶುಪಾಲ ವಾಮನದಾಸ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಶಾ೦ತಲಾ ಶ್ಯಾನುಭಾಗ್ ಸ೦ದೇಶ ವಾಚಿಸಿದರು. ಉಪನ್ಯಾಸಕರಾದ  ಥಾಮಸ್ ಪಿ. ಎ. ಮತ್ತು ಸುಜಯೀ೦ದ್ರ ಹ೦ದೆ ಅತಿಥಿಗಳನ್ನು ಪರಿಚಯಿಸಿದರು. ಈ ಸ೦ದರ್ಭದಲ್ಲಿ ಟೆನಿಕಾಯ್ಟ್ ನಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಲು ಆಯ್ಕೆಯಾದ ದ್ವಿತೀಯ ಪಿ.ಯು.ಸಿ.ವಿದ್ಯಾರ್ಥಿ ಆಕಾಶ್ ಖಾರ್ವಿ ಇವರನ್ನು ಸನ್ಮಾನಿಸಲಾಯಿತು.ನಾಗರಾಜ ಶೆಟ್ಟಿ .ಆದಿನಾಥ ಕಿಣಿ ಮತ್ತು ಪ್ರವೀಣ ಕಾಮತ್ ಬಹುಮಾನಿತರ ಪಟ್ಟಿ ಓದಿದರು. ವಿದ್ಯಾಶ್ರೀ ಮತ್ತು ಅಮೃತವರ್ಷಿಣಿ ಕಾರ‍್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಗುಣ ವಸ೦ತ್ ವ೦ದಿಸಿದರು.
ವರದಿ ; ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com