ಮಲ್ಲಿಬಾರು ಶಾಲಾ ವಾರ್ಷಿಕೋತ್ಸವ

ಬ್ಯೆಂದೂರು: ಮಲ್ಲಿಬಾರು ಸ.ಮಾ.ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಶಾಲೆಗಳಲ್ಲಿ ಶಿಕ್ಷಣಾತ್ಮಕ ಹಾಗೂ ಸಾಂಸ್ಕ್ರತಿಕ ಮನೋಭಾವನೆಗಳನ್ನು ಬಿಂಬಿಸಿ ಜನರ ಪ್ರೀತಿಗಳಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.


 ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ  ಅಧ್ಯಕ್ಷೆ ಗೌರಿ ದೇವಾಡಿಗ, ಕ್ಷೇತ್ರ ಶಿಕ್ಷಣಾದಿಕಾರಿ ಭಾಸ್ಕರ ಶೆಟ್ಟಿ, ಯಡ್ತರೆ ಗ್ರಾ.ಪಂ ಅಧ್ಯಕ್ಷ ನಾಗರಾಜ್ ಶೆಟ್ಟಿ, ತಾ.ಪಂ ಸದಸ್ಯ ರಾಜು ಪೂಜಾರಿ, ಸುಪ್ರೀತಾ ದೀಪಕ್ ಕುಮಾರ್ ಶೆಟ್ಟಿ, ಯಡ್ತರೆ ಗ್ರಾ.ಪಂ ಸದಸ್ಯೆ ಲಲಿತಾ ನಾಗಪ್ಪ ಮರಾಠಿ, ಗ್ರಾ.ಪಂ ಸದಸ್ಯ ಸಿ.ಜೆ.ರೋಯಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಪ್ರಸನ್ನ ಕುಮಾರ ಶೆಟ್ಟಿ, ಉದ್ಯಮಿ ರವೀಂದ್ರ ಕಿಣಿ, ಪತ್ರಕರ್ತ ಅರುಣ ಕುಮಾರ್ ಶಿರೂರು, ಬ್ಯೆಂದೂರು ಕಾಲೇಜಿನ ಉಪ ಪ್ರಾಂಶುಪಾಲೆ ಜ್ಯೋತಿ.ಕೆ.ಇ.ಎಸ್, ಸಂತೋಷ ಪೂಜಾರಿ ತೂದಳ್ಳಿ ಉಪಸ್ಥಿತರಿದ್ದರು.
      ಈ ಸಂಧರ್ಭದಲ್ಲಿ ಕೊಂಕಣಿ ವಿಭೂಷಣ ಪ್ರಶಸ್ತಿ ಪುರಸ್ಕ್ರತ ರಾಮನಾಥ ಮೇಸ್ತ ಶಿರೂರುರವರನ್ನು ಸಮ್ಮಾನಿಸಲಾಯಿತು.

ಮುಖ್ಯ ಶಿಕ್ಷಕ ಗಿರೀಶ್.ಪಿ.ಮೇಸ್ತ ಸ್ವಾಗತಿಸಿ ಸುಧಾಕರ.ಪಿ.ಕಾರ್ಯಕ್ರಮ ನಿರೂಪಿಸಿದರು. ಹಾಲೇಶಪ್ಪ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com