ಪಂಚದೈವ ಪ್ರತಾಪ ಯಕ್ಷಗಾನ ಪ್ರಸಂಗ ಬಿಡುಗಡೆ

ಸಾಸ್ತಾನ: ಪೌರಾಣಿಕ ಹಿನ್ನೆಲೆಯುಳ್ಳ ಯಕ್ಷಗಾನ ಪ್ರಸಂಗಗಳು ಪ್ರಸ್ತುತ ಅಗತ್ಯವಿದ್ದು, ದೈವಗಳ ಮಹತ್ವ ಆಧಾರಿತ ಪ್ರಸಂಗ ಳನ್ನು ಪ್ರದರ್ಶನ ನೀಡುವುದರಿಂದ ಮೇಳಕ್ಕೂ ಖ್ಯಾತಿ ಬರುತ್ತದೆ ಎಂದು ವೇ.ಮೂ. ವೆಂಕಪಯ್ಯ ಭಟ್ ಯಡಬೆಟ್ಟು ಹೇಳಿದರು. 

ಅವರು ಸಾಸ್ತಾನ ಗೋಳಿಗರಡಿ ಮೇಳದವರು ಈ ಸಾಲಿನಲ್ಲಿ ಪ್ರದರ್ಶಿಸಲಿರುವ ಪ್ರಸಂಗಕರ್ತ ಎಂ.ಎಚ್. ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಪಂಚದೈವ ಪ್ರತಾಪ ಪ್ರಸಂಗವನ್ನು ಬಿಡುಗಡೆಗೊಳಿಸಿ ಮಾತನಾಡಿದರು. 

ಛಂದೋಬದ್ಧ ಪ್ರಸಂಗಕರ್ತರೆಂದೇ ಹೆಸರು ಪಡೆದಿರುವ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ 17ನೇ ಪ್ರಸಂಗ ಇದಾಗಿದ್ದು, ಕೃತಿಯನ್ನು ಮೇಳದ ಭಾಗವತ ಹೊಸಾಳ ಉದಯ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು. 

ಮೇಳದ ಅಧ್ಯಕ್ಷ ಜಿ.ವಿಠಲ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋಳಿಗರಡಿ ಪಾತ್ರಿಗಳಾದ ಶಂಕರ ಪೂಜಾರಿ, ಹಿರಿಯ ಕಲಾವಿದ ಹೆಮ್ಮಾಡಿ ರಾಮ ಚೆಂದನ್, ಪ್ರಸಂಗಕರ್ತ ಎಂ.ಎಚ್. ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಐರೋಡಿ ಗೋವಿಂದಪ್ಪ ಶುಭಾಶಂಸನೆ ಗೈದರು. 

ಈ ಸಂದರ್ಭ ಪ್ರಸಂಗಕರ್ತರನ್ನು ಸನ್ಮಾ ನಿಸಲಾಯಿತು. ಮೇಳದ ಜತೆ ಕಾರ್ಯ ದರ್ಶಿ ಎ.ಎನ್. ಶಂಕರ ಕುಲಾಲ್ ಐರೋಡಿ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಪೂಜಾರಿ ಪಾಂಡೇಶ್ವರ ನಿರ್ವಹಿಸಿ ದರು. ಮೇಳದ ಕೋಶಾಧಿಕಾರಿ ಐರೋಡಿ ಗಣಪಯ್ಯ ಆಚಾರ್ಯ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com