ಮಂಗಳೂರು ವಿವಿಯಲ್ಲಿ ಅಡಿಗ ಪೀಠ ಸ್ಥಾಪಿಸಲು ಸಿದ್ಧ

ಬೈಂದೂರು: ಕನ್ನಡ ಕಾವ್ಯ ಪರಂಪರೆಗೆ ಹೊಸ ತಿರುವು ನೀಡಿದ ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಈ ಶತಮಾನದ ಶ್ರೇಷ್ಠ ಕವಿಗಳಲ್ಲೊಬ್ಬರು. ಅವರ ನೆನಪನ್ನು ಶಾಶ್ವತವಾಗಿರಿಸುವು ನಿಟ್ಟಿನಲ್ಲಿ ಅಡಿಗರ ಹುಟ್ಟೂರಿನ ಜನ ಮುಂದೆ ಬಂದರೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಲ್ಲಾ ಸಹಕಾರವನ್ನು ನೀಡಲಾಗುವುದು ಹಾಗೂ ಅವರ ಹೆಸರಲ್ಲಿ ವಿಶ್ವವಿದ್ಯಾಲಯ ಪೀಠ ಸ್ಥಾಪಿಸಲು ಸಿದ್ಧ ಎಂದು ಮಂಗಳೂರು ವಿವಿ ಕುಲಪತಿ ಡಾ. ಕೆ. ಭೈರಪ್ಪ ಹೇಳಿದರು.
    ಅವರು ಸುರಭಿ ಬೈಂದೂರು ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಗೋಪಾಲಕೃಷ್ಣ ರಂಗಮಂಟಪದಲ್ಲಿ ಹಮ್ಮಿಕೊಂಡ ಅಡಿಗ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಅಡಿಗರ ಕುರಿತಾದ ಕಾರ್ಯಕ್ರಮಗಳಿಗೆ ವಿಶ್ವವಿದ್ಯಾನಿಲಯದಿಂದ ಸಹಕಾರ ನೀಡುವುದಾಗಿ ಅವರು ಭರವಸೆಯಿತ್ತರು. 
     ಸಮಾರೋಪ ಭಾಷಣಕಾರರಾಗಿದ್ದ ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ. ಬಿ. ಎ. ವಿವೇಕ ರೈ ಮಾತನಾಡುತ್ತ ಅಡಿಗರು ಕಾವ್ಯವನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡಿದ್ದರು. ಅವರ ಕಾವ್ಯದ ಸಮಗ್ರ ಮೌಲ್ಯಮಾಪನ ನಡೆಯಲಿಲ್ಲ. ಜಾಗತೀಕರಣಕ್ಕಿಂತ ಮೊದಲು ಆ ಕುರಿತು ದಾರ್ಶನಿಕ ಚಿಂತನೆ ನಡೆಸಿದ್ದ ಅಡಿಗರ ಕಾವ್ಯದ ಮೂಲದ್ರವ್ಯದ ಶೋಧನೆ ನಡೆಯಬೇಕು ಎಂದವರು ಹೇಳಿದರು.
ಅಡಿಗರ ಕುಟುಂಬದ ಪ್ರತಿನಿಧಿ ಜಯರಾಮ ಅಡಿಗರನ್ನು ಸನ್ಮಾನಿಸಲಾಯಿತು. ಸುರಭಿಯ ಕೃಷ್ಣಮೂರ್ತಿ ಉಡುಪ ವೇದಿಕೆಯಲ್ಲಿದ್ದರು.
ಬಿ, ಜ್ಯೋತಿ ಸ್ವಾಗತಿಸಿದರು. ಡಾ. ಪ್ರಶಾಂತ ನಾಯಕ್ ಪರಿಚಯಿಸಿದರು. ಸುಧಾಕರ ಪಿ. ಬೈಂದೂರು ವಂದಿಸಿದರು. ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com