ಮೂಡುಬಿದಿರೆ: ಆಳ್ವಾಸ್ ವಿರಾಸತ್ ಅಂಗವಾಗಿ ಜರಗಲಿರುವ ಆಳ್ವಾಸ್ ವರ್ಣ ವಿರಾಸತ್ ರಾಷ್ಟ್ರೀಯ ಮಟ್ಟದ ಆದಿವಾಸಿ ಕಲಾ ಶಿಬಿರದ ಉದ್ಘಾಟನೆಯನ್ನು ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ನ ಸ್ಥಾಪಕ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್ ನೆರವೇರಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರವರು ಅಧ್ಯಕ್ಷತೆ ವಹಿಸಿದ್ದರು. ಗುಜರಾತ್, ಬಿಹಾರ, ಮಧ್ಯಪ್ರದೇಶ ಹಾಗೂ ಜಾರ್ಖಂಡ್ನ ಸುಮಾರು ೧೫ ಕಲಾವಿದರು ಮುಂದಿನ ಹತ್ತು ದಿನಗಳವರೆಗೆ ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದು ತಲಾ ಮೂರು ಕಲಾಕೃತಿಗಳನ್ನು ರಚಿಸಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಭಾಸ್ಕರ್ ನೆಲ್ಯಾಡಿ, ಡಾ. ಮಹಾಬಲೇಶ್, ಶರತ್ ಕುಮಾರ್ ಶೆಟ್ಟಿ ಹಾಗೂ ವಿಪಿನ್ಲಾಲ್ ರವರು ಉಪಸ್ಥಿತರಿದ್ದರು.
0 comments:
Post a Comment