ಉಡುಪಿ ಎಸ್ಪಿಯಾಗಿ ಅಣ್ಣಾಮಲೈ ಅಧಿಕಾರ ಸ್ವೀಕಾರ

ಉಡುಪಿ: ಜಿಲ್ಲೆಯಲ್ಲಿ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐಪಿಎಸ್‌ ಅಣ್ಣಾಮಲೈ ಕೆ. ಅವರು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಬೆಂಗಳೂರಿಗೆ ವರ್ಗಾವಣೆಗೊಂಡ ನಿರ್ಗಮನ ಎಸ್ಪಿ ಪಿ. ರಾಜೇಂದ್ರ ಪ್ರಸಾದ್‌ ಅವರು ಅಣ್ಣಾಮಲೈ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ರಾಜೇಂದ್ರ ಪ್ರಸಾದ್‌ ಮತ್ತು ನಿವೃತ್ತ ಡಿವೈಎಸ್ಪಿ ಡಾ| ಪ್ರಭುದೇವ ಬಿ. ಮಾನೆ ಅವರನ್ನು ಜಿಲ್ಲಾಧಿಕಾರಿ ಡಾ| ಆರ್‌. ವಿಶಾಲ್‌ ಅವರ ಅಧ್ಯಕ್ಷತೆಯಲ್ಲಿ ಬೀಳ್ಕೊಡಲಾಯಿತು.

ಹೆಚ್ಚುವರಿ ಎಸ್ಪಿ ಸಂತೋಷ್‌ ಕುಮಾರ್‌ ಸ್ವಾಗತಿಸಿದರು. ಕಂಟ್ರೋಲ್‌ ರೂಂನ ಎಎಸ್‌ಐ ಬಿ. ಮನಮೋಹನ್‌ ರಾವ್‌ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಸಿಪಿಐ ಶ್ರೀಕಾಂತ್‌ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com