ಯಕ್ಷಗಾನ ಸಾಹಿತ್ಯ-ಪರಂಪರೆ ಮತ್ತು ಪ್ರಯೋಗ ವಿಚಾರ ಸಂಕಿರಣ ಉದ್ಘಾಟನೆ

ಬಸ್ರೂರು: ಯಕ್ಷಗಾನ ವಿಶ್ವವಿದ್ಯಾನಿಲಯದ ಬದಲು ಯಕ್ಷಗಾನ ಸಂಶೋಧನಾ ಕೇಂದ್ರ ಸ್ಥಾಪಿಸುವುದು ಅತಿ ಅಗತ್ಯ. ತನ್ಮೂಲಕ ಹಲವು ಸಾವಿರ ಪ್ರಸಂಗ, ಸಾಹಿತ್ಯದ ಸಂರಕ್ಷಣೆ ಮತ್ತು ಸಂಶೋಧನೆ ಸಾಧ್ಯ ಎಂದು ಮಂಗಳೂರು ವಿವಿ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಕೆ.ಚಿನ್ನಪ್ಪ ಗೌಡ ಹೇಳಿದರು. 
      ಬಸ್ರೂರು ಶಾರದಾ ಕಾಲೇಜಿನಲ್ಲಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿವಿ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಒಂದು ದಿನದ ಯಕ್ಷಗಾನ ಪ್ರಸಂಗ ಸಾಹಿತ್ಯ-ಪರಂಪರೆ ಮತ್ತು ಪ್ರಯೋಗ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 
     ಯಕ್ಷಗಾನ ಪ್ರಸಂಗ ಸಾಹಿತ್ಯ ಅಧ್ಯಯನಕ್ಕೆ ಈವರೆಗೂ ಸೂಕ್ತ ಪ್ರಾಶಸ್ತ್ಯ ಸಿಕ್ಕಿಲ್ಲ. ಈ ನೆಲೆಯಲ್ಲಿ ಯಕ್ಷಗಾನ ಪ್ರಸಂಗ ಸಾಹಿತ್ಯ ಚರಿತ್ರೆಯ ಸಂಪುಟ ರಚನೆಯಾಗಬೇಕಾಗಿದೆ. ಬಹತ್ ಪ್ರಮಾಣದಲ್ಲಿರುವ ಯಕ್ಷಗಾನ ಪ್ರಸಂಗ ಸಾಹಿತ್ಯ ಅಧ್ಯಯನಕ್ಕೆ ಉತ್ತಮ ಸಂಘಟನೆಯ ಅಗತ್ಯತೆಯೂ ಇದೆ. ಯಕ್ಷಗಾನ ಅಧ್ಯಯನ ಕೇಂದ್ರವು ಈಗಾಗಲೆ 2-3 ಯಕ್ಷಗಾನ ಪ್ರಸಂಗಗಳ ಸಂಪುಟ ರಚಿಸುವ ಉದ್ದೇಶ ಹೊಂದಿದೆ. 91 ಪ್ರಸಂಗಗಳ ಸಮೀಕ್ಷೆ ಕೂಡ ನಡೆಸಿದೆ ಎಂದರು. 
     ಬಸ್ರೂರು ಶಾರದಾ ಕಾಲೇಜಿನ ಸಂಚಾಲಕ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ವಿದ್ವಾಂಸ, ನಿವತ್ತ ಉಪನ್ಯಾಸಕ ಡಾ.ಶ್ರೀಧರ ಉಪ್ಪೂರ, ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಕೆ.ಎಂ. ಶೇಖರ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ.ರಾಧಾಕಷ್ಣ ಶೆಟ್ಟಿ ಸ್ವಾಗತಿಸಿದರು. ವಿಚಾರ ಸಂಕಿರಣ ಸಂಯೋಜಕ ಪ್ರೊ.ಪುರುಷೋತ್ತಮ ಬಲ್ಯಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಚಂದ್ರಾವತಿ ಶೆಟ್ಟಿ ಮತ್ತು ಉಪನ್ಯಾಸಕ ಹಳ್ನಾಡು ಪ್ರತಾಪಚಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com