ಬಸ್ರೂರು ಬಿಲ್ಲವ ಸೇವಾ ಸಂಘ: ವಾರ್ಷಿಕೋತ್ಸವ

ಬಸ್ರೂರು:  ಬಿಲ್ಲವ ಸೇವಾ ಸಂಘ ಬಸ್ರೂರು ವಲಯದ  ವಾರ್ಷಿ ಕೋತ್ಸವ ಬಸ್ರೂರಿನ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯಲ್ಲಿ  ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಎಚ್‌. ಜಯಸೂರ್ಯ ಪೂಜಾರಿ  ವಹಿಸಿದ್ದು ಸಮಾಜದ ದುರ್ಬಲ ವರ್ಗದವರನ್ನು  ಗುರುತಿಸಿ  ಸಹಾಯ ಹಸ್ತ ನೀಡುವಲ್ಲಿ  ಸಂಘಟನೆಗಳು ಮಹತ್ವದ ಪಾತ್ರ  ವಹಿಸುತ್ತವೆ ಎಂದರು.

ಮುಖ್ಯ ಅತಿಥಿಗಳಾಗಿ  ಜಿಲ್ಲಾ  ಕೇಂದ್ರ  ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಬು ಬಿಲ್ಲವ, ಭಾಸ್ಕರ  ವಿಠಲವಾಡಿ, ರಾಜು ಕೋಟ್ಯಾನ್‌, ತಾ.ಪಂ ಸದಸ್ಯೆ ಪೂರ್ಣಿಮಾ ಜಿ. ಪೂಜಾರಿ,  ಮಾಜಿ ತಾ.ಪಂ ಸದಸ್ಯ ಎಚ್‌.ಬಾಬು ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಬೇಬಿ ಶ್ರೀಕಾಂತ ಉಪಸ್ಥಿತರಿದ್ದರು.

ಬಸ್ರೂರು ವ್ಯ.ಸೇ. ಸಹಕಾರ ಸಂಘದ ವಲಯ ಮೇಲ್ವಿ ಚಾರಕ ಅಣ್ಣಪ್ಪ  ಬಿಲ್ಲವ,  ಸಮಾಜ ಕಲ್ಯಾಣ ಇಲಾಖಾ  ವಿದ್ಯಾರ್ಥಿ ನಿಲಯಗಳ  ಮೇಲ್ವಿಚಾರಕ, ಸಂಘದ ಕಾರ್ಯದರ್ಶಿ ಭಾಸ್ಕರ ಪೂಜಾರಿ ಹಾಗೂ ಮಂಗಳೂರು ವಿಶ್ವವಿದ್ಯಾಲಯ  ಚೆಸ್‌ ಆಟಗಾರ  ಸಂದೀಪ್‌ ಪೂಜಾರಿ  ಇವರನ್ನು ಸಮ್ಮಾನಿಸಲಾಯಿತು. ಸಂಘದ ನಿರ್ದೇಶಕರಾದ ಗಣೇಶ, ಕೊರಗ  ಹಾಗೂ ಬಸವ ಪೂಜಾರಿ ಉಪ ಸ್ಥಿತರಿದ್ದರು. ಬಹುಮಾನಗಳ ಪಟ್ಟಿಯನ್ನು ಉದಯ ಬಳ್ಕೂರ್‌ ಹಾಗೂ  ಅಶೋಕ ವಾಚಿಸಿದರು. ಗರಡಿ ಗೋಪಾಲ ಪೂಜಾರಿ ಸ್ವಾಗತಿಸಿ, ನರಸಿಂಹ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.  ಶ್ರೀನಾಥ ಪೂಜಾರಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com