ರಾಮಾಂಜನೇಯ ಫ್ರೆಂಡ್ಸ್‌ ವಾರ್ಷಿಕೋತ್ಸವ

ಬಸ್ರೂರು: ಶ್ರೀ  ರಾಮಾಂಜನೇಯ ಫ್ರೆಂಡ್ಸ್‌ (ರಿ.) ಸಾಂತಾವರ ಇವರ ಐದನೇ ವಾರ್ಷಿಕೋತ್ಸವ  ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಗೌರವ ಉಪಸ್ಥಿಯಲ್ಲಿ ನಡೆಯಿತು. 

ಅವರು ಮಾತನಾಡಿ ಯುವ ಸಮೂಹದ ಶಕ್ತಿ ನವ ಸಮಾಜ ಕಟ್ಟುವುದಾಗಿದೆ. ಹಿರಿಯರ  ಮಾರ್ಗ ದರ್ಶನದಲ್ಲಿ ಸೂಕ್ತ  ಸಲಹೆ ಪಡೆದು ಮುನ್ನಡೆಯುವುದರಲ್ಲಿ ಅರ್ಥವಿದೆ. ಈ ಹಿನ್ನೆಲೆಯಲ್ಲಿ  ಶ್ರೀ ರಾಮಾಂಜನೇಯ ಫ್ರೆಂಡ್ಸ್‌ ಶ್ಲಾಘನೀಯವಾಗಿದೆ ಎಂದರು.

ಧರ್ಮದರ್ಶಿ, ಮಾಜಿ ಶಾಸಕ  ಬಿ. ಅಪ್ಪಣ್ಣ ಹೆಗ್ಡೆ  ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಈ ಸಂಘಟನೆ ಸಮಾಜಮುಖೀ ಕಾರ್ಯನಿರ್ವಹಿಸುತ್ತಿ ರುವುದು ಹೆಮ್ಮೆಯ ವಿಷಯ ಎಂದರು.

ಮುಖ್ಯ ಅತಿಥಿಗಳಾಗಿ ಜಿ.ಪಂ.ಉಪಾಧ್ಯಕ್ಷ ಪ್ರಕಾಶ್‌ ಟಿ. ಮೆಂಡನ್‌, ತಾ.ಪಂ. ಅಧ್ಯಕ್ಷ ಭಾಸ್ಕರ್‌ ಬಿಲ್ಲವ, ಉದ್ಯಮಿ ಎನ್‌.ವಿ. ದಿನೇಶ್‌, ನ್ಯೂ ಮೆಡಿಕಲ್ನ ಕೆ. ದಿನಕರ ಶೆಟ್ಟಿ, ಕೊಂಕಣ ರೈಲ್ವೆ ಎಂಜಿನಿಯರ್‌ ಮಾಧವನ್‌, ಸ್ಟೇಷನ್‌ ಮಾಸ್ಟರ್‌ ರಾಜೇಶ್‌ ಶೆಟ್ಟಿ, ಗ್ರಾ.ಪಂ. ಸದಸ್ಯ ರಾಮಚಂದ್ರ ಶೇರೆಗಾರ್‌, ಉದ್ಯಮಿ ನಾಗೇಶ್‌ ಶೇರೆಗಾರ್‌, ಉಪನ್ಯಾಸಕಿ ಚಂದ್ರಾವತಿ ಶೆಟ್ಟಿ, ದಾರುಶಿಲ್ಪಿ ಡಾ| ಗೋಪಾಲ ಆಚಾರ್ಯ ಬಡ್ತಿಮಕ್ಕಿ, ರಾಮಾಂಜನೇಯ ಫ್ರೆಂಡ್ಸ್‌ ಗೌರವ  ಅಧ್ಯಕ್ಷ ರುದ್ರ ಆಚಾರ್‌, ಉಪಾಧ್ಯಕ್ಷೆ ಲೀಲಾವತಿ ಆಚಾರ್‌ ಉಪಸ್ಥಿತರಿದ್ದರು.

ಈ ಸಂದರ್ಭ ಕುಂದಾಪುರದ ಶ್ರೀದೇವಿ ಆ್ಯಂಬ್ಯುಲೆನ್ಸ್‌ನ ಮಾಲಕ ವಿ.ವಾಸುದೇವ ಹಂದೆ ಅವರನ್ನು ಸಮ್ಮಾನಿಸಲಾಯಿತು. ಸ.ಹಿ.ಪ್ರಾ. ಶಾಲೆ ಮೂಡ್ಲಕಟ್ಟೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ  ವಿತರಿಸಲಾಯಿತು. ಕ್ರೀಡಾ ವಿಜೇತರಿಗೆ ಬಹುಮಾನ ನೀಡಲಾಯಿತು.

ರಾಮಾಂಜನೇಯ ಫ್ರೆಂಡ್ಸ್‌ನ ಅಧ್ಯಕ್ಷ ಸುರೇಶ್‌ ಶೇರೆಗಾರ್‌ ಸ್ವಾಗತಿಸಿದರು. ಜಗದೀಶ್‌ ಮೂಡ್ಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಪೂಜಾರಿ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ  ನಡೆಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com