ಭಂಡಾರ್‌ಕಾರ್ಸ್ ಕಾಲೇಜು ವಾರ್ಷಿಕೋತ್ಸವ

ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿ ಕಲಿಯುವುದು ಬಹಳಷ್ಟಿದೆ.  ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಾಗಿ ಹಾಗೂ ಪಾಠೇತರ ಚಟುವಟಿಕೆಗಳಲ್ಲಿಯೂ ತುಂಬಾ ಪ್ರೋತ್ಸಾಹವನ್ನು ಕೊಡುತ್ತಿದ್ದಾರೆ.  ಅದರಿಂದಾಗಿಯೇ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಿದ್ದಾರೆ.  ಜೀವನದಲ್ಲಿ ಶಿಸ್ತನ್ನು ಅಳವಡಿಸಿ, ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಡಾ| ಎಚ್‌.ಎಸ್‌. ಬಲ್ಲಾಳ್‌ ಹೇಳಿದರು.  
ಅವರು ಭಂಡಾರ್‌ಕಾರ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
      ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ರಾಷ್ಟ್ರ ಪ್ರಶಸ್ತಿ  ಪುರಸ್ಕೃತ  ಗೋಪಾಲ ಶೆಟ್ಟಿ ಆಗಮಿಸಿ ತನ್ನ ಬದುಕು ಸಾಧನೆಯ ಕುರಿತಾದ ವಿಚಾರಗಳನ್ನು ಹಂಚಿಕೊಂಡರು. 
      ಮಣಿಪಾಲ ಆಕಾಡೆಮಿಯ ಆಡಳಿತಾಧಿಕಾರಿ ಡಾ| ಎಚ್‌. ಶಾಂತರಾಮ್‌  ಅಧ್ಯಕ್ಷತೆ ಯನ್ನು ವಹಿಸಿದ್ದರು.  ಕಾಲೇಜಿನ ವಿಶ್ವಸ್ತ ಶಾಂತಾರಾಮ್‌ ಪ್ರಭು,  ರಾಜೇಂದ್ರ ತೋಳಾರ್‌, ಪದವಿ ಕಾಲೇಜಿನ ಪ್ರಾಂಶುಪಾಲ   ಡಾ| ಎನ್‌. ಪಿ. ನಾರಾಯಣ ಶೆಟ್ಟಿ  ಉಪಸ್ಥಿತರಿದ್ದರು.  
     ಪ್ರಾಂಶುಪಾಲ  ಜಿ.ಎಂ. ಗೊಂಡ  ಸ್ವಾಗತಿಸಿ, ವರದಿ ವಾಚಿಸಿದರು.  ವಿದ್ಯಾರ್ಥಿನಿ ಪ್ರಸಿದ್ಧಿ ಪೈ ನಿರೂಪಿಸಿದರು. ರೋಹಿತ್‌ ಬಾಬು ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com