ಅವಳಿ ಕರು ಹೆತ್ತ ಎಮ್ಮೆ

ಆಲೂರು: ಒಂದು ಕರುವಿಗೆ ಜನ್ಮವಿತ್ತ ಎಮ್ಮೆಯೊಂದು ಮೂರು ದಿನಗಳ ಬಳಿಕ ಇನ್ನೊಂದು ಕರುವಿಗೆ ಜನ್ಮ ನೀಡಿದ್ದು, ಪಶುವೈದ್ಯಲೋಕವನ್ನೇ ಅಚ್ಚರಿಯಲ್ಲಿ ಕೆಡವಿದ ಅಪರೂಪದ ಘಟನೆ ಆಲೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಟ್ಟಿನಮಕ್ಕಿ ನಾರಾಯಣ ದೇವಾಡಿಗ ಎಂಬುವವರ ಹಟ್ಟಿಯಲ್ಲಿ ನಡೆದಿದೆ. ನಾರಾಯಣ ದೇವಾಡಿಗ ಅವರ ಸಾಕುಎಮ್ಮೆ ಜನವರಿ 7ರಂದು ಕರುವೊಂದನ್ನು ಹೆತ್ತಿದ್ದು, ಜನವರಿ 10ರಂದು ಪುನಃ ಮತ್ತೂಂದು ಕರುವಿಗೆ ಜನ್ಮನೀಡಿದೆ. ಅಚ್ಚರಿ ಎಂದರೆ ಅವಳಿ ಕರುಗಳೂ ಗಂಡಾಗಿದ್ದು, ತಾಯಿ-ಮಕ್ಕಳು ಇಬ್ಬರೂ ಆರೋಗ್ಯವಾಗಿವೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com