ಮಾನವ ಹಕ್ಕು ಜನಜಾಗೃತಿ ಸಮಿತಿ ಉದ್ಘಾಟನೆ

ಬೈಂದೂರು: ಮಾನವ ಹಕ್ಕು ಜನಜಾಗೃತಿ ಸಮಿತಿ ಇದರ ನೂತನ ಕಚೇರಿಯನ್ನು ಬೈಂದೂರಿನಲ್ಲಿ ಉದ್ಘಾಟಿಸಲಾಯಿತು. 

ಉಡುಪಿ ಜಿಲ್ಲೆ ಕ.ಸಾ.ಪ. ಮಾಜಿ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ ಮಾತನಾಡಿ ಸೇವೆ, ಜಾಗೃತಿ, ಹಾಗೂ ಹೋರಾಟಗಳು ಸಂಘಟನೆಗಳ ಮುಖ್ಯ ಧ್ಯೇಯಗಳಾಗಿವೆ ಅಧಿಕಾರದ ದುರ್ಬಳಕೆ ಹಾಗೂ ಸಾಮಾಜಿಕ ವ್ಯತಿರಿಕ್ತ ಚಿಂತನೆಗಳಿಂದ ಗೌರವಾನ್ವಿತರು ಮುಜುಗರಕ್ಕೆ ಒಳ ಪಡಬೇಕಾಗುತ್ತಿದೆ. ಸಾಮಾಜಿಕ ಜಾಗೃತಿ ಹಾಗೂ ಕಾನೂನುಗಳ ಸದ್ಬಳಕೆಗೆ ಮಾನವ ಹಕ್ಕು ಜನಜಾಗೃತಿ ಸಮಿತಿ ಅವಶ್ಯವಾಗಿದೆ. ಸಮಾನ ಮನಸ್ಸು ಸಂಘಟನೆಯಿಂದ ಯಶಸ್ಸು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನಚಂದ್ರ ಮಾತನಾಡಿ ರಾಜಕೀಯ, ಮುಕ್ತ ಹೋರಾಟದಿಂದ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ. ಸಾಮಾಜಿಕ ಜಾಗೃತಿ ಮೂಡಿಸುವ ಹಾಗೂ ನೊಂದವರ ಪರ ಕಾರ್ಯ ಮಾಡುವುದು ಜನಜಾಗೃತಿ ಸಮಿತಿಯ ಧ್ಯೇಯವಾಗಿದೆ ಎಂದರು.

ಯಡ್ತರೆ ಗ್ರಾ.ಪಂ. ಅಧ್ಯಕ್ಷ ನಾಗರಾಜ್‌ ಶೆಟ್ಟಿ, ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚೆನ್ನಕೇಶವ ಉಪಾಧ್ಯಾಯ, ಕಾರ್ಯ ದರ್ಶಿ ರವೀಂದ್ರ ಶ್ಯಾನುಭೋಗ್‌ ಉಪಸ್ಥಿತರಿದ್ದರು. ಗಣೇಶ ಮಯ್ಯ ಸ್ವಾಗತಿಸಿದರು, ಗಣಪತಿ ಹೋಬಳಿದಾರ  ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮಣ ಕೆ. ಬೈಂದೂರು  ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com