ಬೆಂಗಳೂರಿನಲ್ಲಿ ಸತೀಶ್ ಆಚಾರ‍್ಯರ ಕಾರ್ಟೂನುಗಳ ಅನಾವರಣ

ಕುಂದಾಪುರ:  ಅಂತರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ್ ಆಚಾರ‍್ಯ ಅವರ ಕಾರ್ಟೂನುಗಳ ಪ್ರದರ್ಶನ ಜನವರಿ 31ರಂದು ಬೆಂಗಳೂರಿನ ಇಂಡಿಯನ್ ಕಾರ್ಟೂನು ಗ್ಯಾಲರಿಯಲ್ಲಿ ಉದ್ಘಾಟನೆಗೊಳ್ಳಲಿದ್ದು ಇದೇ ಸಂದರ್ಭ ಅವರ ಕ್ರಿಕೆಟ್ ಕಾರ್ಟೂನುಗಳ ಸಂಕಲನ 'ನಾನ್ ಸ್ಟ್ರೈಕರ್' ಪುಸ್ತಕವು  ಬಿಡುಗಡೆಗೊಳ್ಳಲಿದೆ.
    ನಕ್ಕು ನಗಿಸುವ, ನಗುವಿನ ಹಿಂದೆ ಮೊನಚಾದ ಗೆರೆಗಳಲ್ಲಿ ವಿಡಂಬನೆಯನ್ನು ತುಂಬಿ ಕಾರ್ಟೂನ್ ಪ್ರಿಯರ ಮನಗೆದ್ದಿರುವ ಸತೀಶರ ಪೆನ್ಸಿಲಿನ ಗೆರೆಗಳಿಗೆ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. (ಸತೀಶ್ ಆಚಾರ್ಯರ ಕಾರ್ಟೂನು ಪೆಜ್)
     ಜ. 31ರ ಶನಿವಾರ ಬೆಳಿಗ್ಗೆ 11ಗಂಟೆಗೆ ಆರಂಭಗೊಳ್ಳಲಿರುವ ಕಾರ್ಟೂನು ಪ್ರದರ್ಶನದಲ್ಲಿ ವಿಶೇಷ ಆಹ್ವಾನಿತರಾಗಿ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಸದಾನಂದ ವಿಶ್ವನಾಥ ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರ ಪ್ರಭಾಕರ ರಾವ್.ಬೈಲ್ ಉಪಸ್ಥಿತರಿರುವರು. 

     ಈವರೆಗೆ ಹಲವು ಬಾರಿ ತಮ್ಮ ಕಾರ್ಟೂನು ಪ್ರದರ್ಶನಗಳನ್ನು ಏರ್ಪಡಿಸಿರುವ ಸತೀಶ್ ತಮ್ಮ ಹುಟ್ಟೂರಿನಲ್ಲಿ ಅಯೋಜಿಸಿದ್ದ 'ಕುಂದಾಪ್ರ ಕಾರ್ಟೂನು ಹಬ್ಬ' ವಿಶೇಷ ಜನಮನ್ನಣೆ ಗಳಿಸಿತ್ತು. ಅವರು ಈ ತನಕ ಮೇ-ಹಮ್ ಆ್ಯಂಡ್ ಆಪ್, ಕಾರ್ಟೂನಿಷ್ಠ ಹಾಗೂ ಕುಂದಾಪ್ರ ಕನ್ನಡದಲ್ಲಿ ನೆಗಿಪುಗ್ಗಿ ಎಂಬ ಮೂರು ಪುಸ್ತಕಗಳನ್ನು ಪ್ರಕಟಿಸಿದ್ದು, ಕ್ರಿಕೆಟ್ ಮೇಲಿನ ಅಭಿಮಾನದಿಂದಾಗಿ  ಕ್ರಿಕೆಟ್ ಕಾರ್ಟೂನುಗಳ ಸಂಕಲನ 'ನಾನ್ ಸ್ಟ್ರೈಕರ್' ಪುಸ್ತಕವನ್ನು ಪ್ರಕಟಿಸಿದ್ದಾರೆ.

     ಕಾರ್ಟೂನ್ ಪ್ರಿಯರು ಹಾಗೂ ಸತೀಶ್ ಆಚಾರ‍್ಯ ಅವರ ಅಭಿಮಾನಿಗಳು ಕಾರ್ಟೂನ್ ಗ್ಯಾಲರಿಗೆ ಭೇಟಿ ನೀಡಿ ಅವರ ವಿಶಿಷ್ಟ ಕಾರ್ಟೂನುಗಳನ್ನು ವೀಕ್ಷಿಸಬಹುದಾಗಿದೆ. ಫೆ. 14ರವರಗೆ ಅವರ ಸಂಪಾದಕೀಯ ಕಾರ್ಟೂನುಗಳು ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿದೆ.

ವಿಳಾಸ:
ಇಂಡಿಯನ್ ಕಾರ್ಟೂನು ಗ್ಯಾಲರಿ
ನಂ.1, ಮಿಡ್ ಫೋರ್ಡ್ ಹೌಸ್, ಮಿಡ್ ಪೋರ್ಡ್ ಗಾರ್ಡನ್
ಎಂ.ಜಿ.ರೋಡ್ ಎದುರು, ಬೆಂಗಳೂರು
Mobile : 9980091428

ಹತ್ತಿರದ ಬಸ್ ನಿಲ್ದಾಣ: ಟ್ರಿನಿಟಿ ವೃತ್ತ

ಸತೀಶ್ ಆಚಾರ್ಯ ಫೇಸ್ ಬುಕ್ ಪ್ರೊಫೈಲ್

Famous cartoonist Satish Acharya's Editorial cartoon exhibition and his cricket cartoon book 'Non-Striker' will release on 31 jan 2015 at Indian Cartoon Gallery Bangalore
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com