ಜಿಲ್ಲಾ ಮಟ್ಟದ ಗೇರು ಬೆಳೆ ವಿಚಾರ ಸಂಕಿರಣ

ಕೆಂಚನೂರು : ಬಡವರ ಬೆಳೆ ಶ್ರೀಮಂತರ ಹಣ ಎನ್ನು ವಂತಾಗಿದೆ ಗೇರು ಕೃಷಿ. ಗೇರು ಬೆಳೆಗೆ 150 ರೂ. ಧಾರಣೆಗೆ ಬರಬೇಕಾಗಿದೆ. ರೈತರು ಮುಂದೆ ಬಂದು ಕೃಷಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಕೊಳ್ಳುವ ಕೆಲಸವಾಗಬೇಕು. ಗೇರಿಗೆ ಬಾಧಿತವಾಗುವ ರೋಗಗಳ ಬಗ್ಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಸಹ ಸಂಶೋಧನಾ ನಿರ್ದೇಶಕ ಡಾ. ಎಂ. ಹನುಮಂತಪ್ಪ ಎಂದರು. 

ಕೆಂಚನೂರು ಶ್ರೀ ನಾಗನಾಥ ದೇವಸ್ಥಾನದ ಶ್ರೀ ಜನಾರ್ದನ ಉಡುಪರ ಶ್ರೀ ಕಾರ್ತಿಕ ಫಾರಂನಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಭಾರತೀಯ ಕೃಷಿ ಅನುಸಂಧನಾ ಕೇಂದ್ರ, ನವದೆಹಲಿ ವಲಯ ಕಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ಉಡುಪಿ, ಗೇರು ಮತ್ತು ಕೋಕೋ ಅಭಿವದ್ಧಿ ನಿರ್ಧೇಶನಾಲಯ, ಕೊಚ್ಚಿನ್, ಭಾರತೀಯ ಕಿಸಾನ್ ಸಂಘ, ಕುಂದಾಪುರ ತಾಲೂಕು ಸಮಿತಿ, ಉಡುಪಿ ಜಿಲ್ಲೆ ಸಹಯೋಗದಲ್ಲಿ ಆಯೋಜಿಸಲಾದ  ಜಿಲ್ಲಾ ಮಟ್ಟದ ಗೇರು ಬೆಳೆಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. 

ಗೇರು ಕೃಷಿಯ ಪ್ರಭಾವ ಕರಾವಳಿ ಅಲ್ಲದೆ ಘಟ್ಟ ಪ್ರದೇಶಗಳಲ್ಲೂ ಕೂಡ ಪಸರಿಸಿದೆ, ಜನರಲ್ಲಿ ಗೇರು ಕೃಷಿ ಬಗ್ಗೆ ಇರುವ ಕೀಳರಿಮೆ ದೂರವಾಗಬೇಕು, ಕಟ್ಟ ಕಡೆಯ ಬೆಳೆಯಾಗಿ ಬೆಳೆಯುವ ಗೇರು ಕೃಷಿ ಅತ್ಯುನ್ನತ ಬೆಳೆಯಾಗಿ ಬೆಳೆಯುವ ತಂತ್ರಗಳು ತಿಳಿದುಕೊಳ್ಳಬೇಕಾಗಿದೆ. ತಾಂತ್ರಿಕತೆ ಉಪಯೋಗಿಸಿಕೊಂಡು ಉತ್ತಮ ತಳಿಯ ಗೇರು ಬೆಳೆದು ಉತ್ತಮ ಫಸಲನ್ನು ಬೆಳೆಯುವ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆ ಇದೆ ಎಂದರು. 

ಬೈಂದೂರು ವಿದಾನಸಭಾ ಕ್ಷೇತ್ರ ಶಾಸಕ ಕೆ. ಗೋಪಾಲ ಪೂಜಾರಿ ಉದ್ಘಾಟಿಸಿದರು. ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ಬಿ.ವಿ. ಪೂಜಾರಿ ಪೇರ್ಡೂರು ಅಧ್ಯಕ್ಷತೆ ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿದೇಶಕ ಕೆ.ಎ. ವಿಜಯ ಕುಮಾರ್, ಪುತ್ತೂರು ದ.ಕ. ಜಿಲ್ಲ್ಲಾ ರ್ಟ್ರೋಯ ಗೇರು ಸಂಶೋಧನಾ ನಿರ್ಧೇಶನಾಲಯದ ಹಿರಿಯ ವಿಜ್ಞಾನಿ (ತೋಟಗಾರಿಕೆ) ಡಾ.ಜೆ.ದಿನಕರ ಅಡಿಗ, ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ದ.ಕ. ಕೀಟಶಾಸ್ತ್ರ ವಿಜ್ಙಾನಿ ಡಾ.ಕೆ. ವನಿತ, ಪ್ರಗತಿಪರ ಕೃಷಿಕ ಕೆಂಚನೂರು ಸೋಮಶೇಖರ ಶೆಟ್ಟಿ, ಮಾನಂಜೆ ವ್ಯವಸಾಯ ಸಂಘದ ಮಾಜಿ ಅದ್ಯಕ್ಷ ವಾಸುದೇವ ಯಡಿಯಾಳ, ಭಾರತೀಯ ಕಿಸಾನ ಸಂಘದ ಪ್ರದಾನ ಕಾರ್ಯದರ್ಶಿ ವೆಂಕಟೇಶ್ ಹೆಬ್ಬಾರ್, ಕಿಶನ್ ಕುಮಾರ್, ಚಂದ್ರ ಶೇಖರ ಉಡುಪ, ಜನಾರ್ಧನ ಉಡುಪ ಉಪಸ್ಥಿತರಿದ್ಧರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ವಿಷಯ ತಜ್ಞರಾದ ಡಾ. ಜಯಲಕ್ಷ್ಮೀ ನಾರಾಯಣ ಹೆಗಡೆ ಸ್ವಾಗತಿಸಿದರು. ತರಬೇತಿ ಸಹಾಯಕ ಸಂಜೀವ ಕ್ಯಾತಪ್ಪನವರ್ ನಿರೂಪಿಸಿದರು. 


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com