ಜ.24ಕ್ಕೆ 'ಚುಕ್ಕಿ ಚಂದ್ರಮ'ನ ನೋಡೋಣ ಬನ್ನಿ

ಕುಂದಾಪುರ:  ಜನಸಾಮಾನ್ಯರಿಗೆ ಗ್ರಹಗಳ ಚಲನವಲನಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆಯು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಡುಪಿ ಜಿಲ್ಲಾಘಟಕದ ಸಹಯೋಗದೊಂದಿಗೆ `ಚುಕ್ಕಿ ಚಂದ್ರಮ' ಎಂಬ ಆಕಾಶ ವೀಕ್ಷಣೆ ಕಾರ್ಯಕ್ರಮವನ್ನು ಇಲ್ಲಿನ ಭಂಡಾರ್ಕರ್ಸ್ ಕಾಲೇಜಿನಲ್ಲಿ ಜನವರಿ 24ರಂದು  ಆಯೋಜಿಸಿದೆ. ಅಪರಾಹ್ನ 3.00ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಭಾತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ.ಪಿ. ಭಟ್ ಮತ್ತು ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಗಣಿತ ಉಪನ್ಯಾಸಕ  ಕಿಶೋರ ಹಂದೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಪ್ರಾತ್ಯಕ್ಷಿಕೆ, ಸಂವಾದ ಮತ್ತು ರಾತ್ರಿಯಾಕಾಶ ವೀಕ್ಷಣೆಗಳನ್ನೊಳಗೊಂಡ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರಾವಿಪ ಉಡುಪಿ ಘಟಕದ ಅಧ್ಯಕ್ಷರಾದ ಯು. ಆರ್ ಮಧ್ಯಸ್ಥ ಮತ್ತು ಕುಂದಾಪುರ ಸಮುದಾಯದ ಅಧ್ಯಕ್ಷರಾದ  ಉದಯ ಗಾಂವಕಾರ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
     ಗ್ರಹಗಳು ಮತ್ತು ನಕ್ಷತ್ರಗಳ ಗೋಚರ ಚಲನೆಯಾಧರಿಸಿ ವ್ಯಕ್ತಿಯ ಭವಿಷ್ಯವನ್ನು ಮುನ್ಸೂಚಿಸಬಹುದೆಂಬ ಅಂಧಶ್ರಧ್ಧೆಯನ್ನು ಬಿತ್ತಿ ಜನರಲ್ಲಿ ಭಯ ಮತ್ತು ಅಭದ್ರತೆ ಕಾಡುವಂತೆ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಇದೊಂದು ಹಣಮಾಡುವ ದಂದೆಯಾಗಿಯೂ ಬೆಳೆಯುತ್ತಿದೆ. ತಾವು ಶೋಷಣೆಗೊಳಗಾಗುತ್ತಿದ್ದೇವೆ ಎಂಬ ಅರಿವಿಲ್ಲದ ಮುಗ್ಧರೇ ಈ ಕಾಳದಂದೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ. ಈ ಕುರಿತಾಗಿ ಜನಜಾಗೃತಿ ಮೂಡಿಸುವುದು  ಸದ್ಯದ ತುರ್ತು ಎಂದು ಅವರು ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

1 comments:

Uday Gaonkar said...

ಕುಂದಾಪ್ರ ಡಾಟ್ ಕಾಮ್ ಬಳಗದ ವೃತ್ತಿಪರತೆ ಪ್ರಶಂಸಾರ್ಹ. ಧನ್ಯವಾದಗಳು!.

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com