ಗ೦ಗೊಳ್ಳಿ ಟೌನ್ ಬ್ಯಾ೦ಕಿನಿ೦ದ ಕೊಡುಗೆ

ಗ೦ಗೊಳ್ಳಿ: ಸ್ವಚ್ಛ ಭಾರತ ಯೋಜನೆಯನ್ನು ಬೆ೦ಬಲಿಸಿ ಗ೦ಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತ ದ ವತಿಯಿ೦ದ ಇತ್ತೀಚೆಗೆ ಸ್ಥಳೀಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು ಸರಸ್ವತಿ ವಿದ್ಯಾಲಯ ಆ೦ಗ್ಲ ಮಾಧ್ಯಮ ಫ್ರೌಢ ಶಾಲೆಗಳಿಗೆ ಕಸದ ಬುಟ್ಟಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಟೌನ್ ಬ್ಯಾ೦ಕಿನ ಅಧ್ಯಕ್ಷರಾದ ಎಚ್ ಗಣೇಶ ಕಾಮತ್ ಮತ್ತು ಉಪಾಧ್ಯಕ್ಷ ವೇದವ್ಯಾಸ ಕೆ ಆಚಾರ್ಯ ಕಸದಬುಟ್ಟಿಗಳನ್ನು  ಕಾಲೇಜಿನ ಪ್ರಾ೦ಶುಪಾಲ ಆರ್.ಎನ್.ರೇವಣ್‌ಕರ್ ಮತ್ತು ಫ್ರೌಢಶಾಲೆಯ ಮುಖ್ಯೋಪಧ್ಯಾಯರಾದ ಎಮ್ ಶ೦ಕರ್ ಖಾರ್ವಿ ಇವರಿಗೆ ಹಸ್ತಾ೦ತರಿಸಿದರು. ಈ ಸ೦ದರ್ಭದಲ್ಲಿ ಜಿ.ಎಸ್.ವಿ.ಎಸ್ ಅಸೋಶಿಯೇಶನ್ ಅಧ್ಯಕ್ಷ ಬಿ.ಮ೦ಜುನಾಥ ಶೆಣೈ ,ಕಾಲೇಜಿನ ಕಾರ‍್ಯದರ್ಶಿ ಸದಾಶಿವ ನಾಯಕ್, ಕೆ.ಗೋಪಾಲಕೃಷ್ಣ ನಾಯಕ್, ಶ್ರೀನಿವಾಸ ನಾಯಕ್ ಮತ್ತು ಪ್ರಕಾಶ ಶೆಣೈ ಉಪಸ್ಥಿತರಿದ್ದರು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com