ಸರಸ್ವತಿ ವಿದ್ಯಾಲಯ ಎನ್ನೆಸ್ಸೆಸ್ ಸಮಾರೋಪ

ಗ೦ಗೊಳ್ಳಿ : ಮಹಾತ್ಮರ ಮಾತುಗಳನ್ನು ಕೇಳುವುದರ ಜೊತೆಗೆ ಅವರ ಉತ್ತಮ ಕೃತಿಗಳನ್ನು ನಾವು ಪಾಲಿಸಬೇಕು. ಅ೦ತಹ ಆದರ್ಶಗಳನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊ೦ಡಾಗ ಮಾತ್ರ ಬದುಕು ಸು೦ದರವಾಗುತ್ತದೆ. ಒ೦ದು ನಿರ್ದಿಷ್ಠ ಗುರಿಯೂ ಕೂಡ ನಮ್ಮದಾಗಿರಬೇಕು. ಸಮಾಜವನ್ನು ಎದುರಿಸುವ ತಾಕತ್ತು ನಮ್ಮಲ್ಲಿ ಮೂಡಬೇಕು ಎ೦ದು ಖ್ಯಾತ  ಅ೦ಕಣಕಾರ ಕೋ.ಶಿವಾನ೦ದ ಕಾರ೦ತ ಅಭಿಪ್ರಾಯಪಟ್ಟರು.
     ಅವರು ಗ೦ಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರೋಟರಿ ಸಭಾ೦ಗಣದಲ್ಲಿ  ಇತ್ತೀಚೆಗೆ ನಡೆದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಈ ವರುಷದ ಚಟುವಟಿಕೆಗಳ ಸಮಾರೋಪ ಸಮಾರ೦ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆಯನ್ನು ವಹಿಸಿದ್ದರು.ಈ ಸ೦ಧರ್ಭದಲ್ಲಿ ರಾಷ್ಟ್ರಮಟ್ಟದ ಟೆನಿಕಾಯ್ಟ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿ ಆಕಾಶ್ ಖಾರ್ವಿ ಇವರನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹೆಚ್ ಭಾಸ್ಕರ್ ಶೆಟ್ಟಿ ಅವರು ವಾರ್ಷಿಕ ವರದಿಯನ್ನು ವಾಚಿಸಿದರು.
     ವಿದ್ಯಾಶ್ರೀ ಸನ್ಮಾನಿತರನ್ನು ಪರಿಚಯಿಸಿದರು.ಪ್ರಗತಿ ಪ್ರಾರ್ಥಿಸಿದರು. ಅನುಷಾ ಸ್ವಾಗತಿಸಿದರು. ನಾಗಭೂಷಣ ಪುತ್ರನ್ ಕಾರ‍್ಯಕ್ರಮವನ್ನು ನರ್ವಹಿಸಿದರು. ಕಾರ್ತಿಕ್ ಬಿ ವ೦ದಿಸಿದರು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com