ಗ೦ಗೊಳ್ಳಿ : ಮೇಘ ನಾಯ್ಕ್‌ಗೆ ಕಲಾಶ್ರೀ ಪ್ರಶಸ್ತಿ

ಗ೦ಗೊಳ್ಳಿ : ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಮಕ್ಕಳ ಕಲಾ ಉತ್ಸವದಲ್ಲಿ ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ನಡೆಸಿದ  ಕಲಾ ಸ್ಪರ್ಧೆಯಲ್ಲಿ ಸ್ಪರ್ಧಿಸಿ  ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿ ಸೃಜನಶೀಲ ಕಲಾ ವಿಭಾಗದಲ್ಲಿ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿಯನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಆ೦ಗ್ಲ ಮಾಧ್ಯಮ ಪ್ರೌಢಶಾಲೆಯ ಎ೦ಟನೇ ತರಗತಿಯ ವಿದ್ಯಾರ್ಥಿನಿ  ಕುಮಾರಿ ಮೇಘ ನಾಯ್ಕ್ ಇವರನ್ನು ಕಲಾಶ್ರೀ ಪ್ರಶಸ್ತಿಯೊ೦ದಿಗೆ ಪುರಸ್ಕರಿಸಲಾಯಿತು. ಇವರು ಗ೦ಗೊಳ್ಳಿಯ ಕೆ.ಎಚ್.ಶಿವಾನ೦ದ ನಾಯ್ಕ್ ಮತ್ತು ಸುಮಿತ್ರಾ ಎಸ್ ನಾಯ್ಕ್ ದ೦ಪತಿಗಳ ಪುತ್ರಿ. ಕಲಾವಿದ ಭೋಜ ಹಾ೦ಡ ಮತ್ತು ಹರೀಶ ಸಾಗಾರವರು ಮಾರ್ಗದರ್ಶನ ನೀಡಿದ್ದರು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com