ಗಂಗೊಳ್ಳಿ ಸರಸ್ವತಿ ವಿದ್ಯಾಲಯ: ಗ್ರಾಹಕ ಜಾಗೃತಿ

ಗಂಗೊಳ್ಳಿ: ಯಾವುದೇ ವಸ್ತುಗಳನ್ನು ಕೊಳ್ಳುವಾಗ ಗ್ರಾಹಕರು ಅದರ ಪೂರ್ವಾಪರಗಳನ್ನು ಆದಷ್ಟು ತಿಳಿದು ಕೊಂಡಿರಬೇಕು. ಅಬ್ಬರದ ಜಾಹೀರಾತುಗಳಿಗೆ ಮರುಳಾಗದೇ ಉತ್ತಮ ವಸ್ತುವಿನ ಆಯ್ಕೆಯಲ್ಲಿ ಎಚ್ಚರ ವಹಿಸಬೇಕು. ಮೋಸ ಹೋದ ಸಂದರ್ಭಗಳಲ್ಲಿ ಅದನ್ನು ನೇರವಾಗಿ ಪ್ರತಿಭಟಿಸಬೇಕು ಮತ್ತು ಅವಶ್ಯವೆನಿಸಿದಲ್ಲಿ ಗ್ರಾಹಕ ನ್ಯಾಯಾಲಯಗಳ ನೆರವನ್ನು ಪಡೆದುಕೊಳ್ಳಬೇಕು ಎಂದು ಕುಂದಾಪುರ ವಿಭಾಗದ ಕಾನೂನು ಮತ್ತು ಮಾಪನಶಾಸ್ತ್ರ ಇಲಾಖೆಯ ನಿರೀಕ್ಷಕ ರಾಮಚಂದ್ರ ಅವರು ಹೇಳಿದರು.

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಜರಗಿದ ಗ್ರಾಹಕ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಲೇಜಿನ ಕಾರ್ಯದರ್ಶಿ ಎನ್‌. ಸದಾಶಿವ ನಾಯಕ್‌ ಅವರು ಅಧ್ಯಕ್ಷತೆ ವಹಿಸಿದ್ದರು. 

ಪ್ರಾಂಶುಪಾಲ ಆರ್‌. ಎನ್‌. ರೇವಣ್‌ಕರ್‌ ಅವರು ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಎಸ್‌ ಗಂಗೊಳ್ಳಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಆರ್‌ ಕೆ ಸುಗುಣಾ ಅವರು ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com