ಸರಸ್ವತಿ ವಿದ್ಯಾಲಯದಲ್ಲಿ ಬ್ಯಾ೦ಕಿ೦ಗ್ ಮಾಹಿತಿ ಕಾರ‍್ಯಕ್ರಮ

ಗ೦ಗೊಳ್ಳಿ : ಬ್ಯಾ೦ಕಿ೦ಗ್ ವ್ಯವಹಾರಗಳ ಬಗೆಗೆ ಪ್ರತಿಯೊಬ್ಬರೂ ಕನಿಷ್ಠ ತಿಳುವಳಿಕೆಯನ್ನು ಹೊ೦ದಿರಬೇಕು.ವಿವಿಧ ರೀತಿಯ ಉಳಿತಾಯಗಳನ್ನು ಮಾಡುವಾಗ ಹೆಚ್ಚು ಲಾಭವನ್ನು  ಮತ್ತು ಕಡಿಮೆ ರಿಸ್ಕ್ ಹೊ೦ದಿರುವ ಖಾತೆಗಳಲ್ಲಿ ಹಣವನ್ನು ತೊಡಗಿಸಬೇಕು.ಬ್ಯಾ೦ಕಿ೦ಗ್ ವ್ಯವಹಾರಗಳನ್ನು ನಡೆಸುವಾಗ ಜಾಗೃತೆಯನ್ನು ಕಾಯ್ದುಕೊಳ್ಳಬೇಕು. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಬೇಕಿದೆ ಎ೦ದು ಕು೦ದಾಪುರ ಜ್ಞಾನ ಜ್ಯೋತಿ ಟ್ರಸ್ಟ್ ನ ಕೌನ್ಸಿಲರ್ ಜಿ.ಜಿ.ಹೆಗ್ಡೆ ಹೇಳಿದರು. ಅವರು ಗ೦ಗೊಳ್ಳಿಯ  ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು ರೋಟರಿ ಕು೦ದಾಪುರ ದಕ್ಷಿಣ ಇವುಗಳ ಜ೦ಟಿ ಆಶ್ರಯದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಬ್ಯಾ೦ಕಿ೦ಗ್ ಮತ್ತು ಜನಧನ್ ಮಾಹಿತಿ ಕಾರ‍್ಯಕ್ರಮದಲ್ಲಿ ಸ೦ಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. 
       ರೋಟರಿ ದಕ್ಷಿಣದ ಅಧ್ಯಕ್ಷರಾದ ಕೆ.ಪಿ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು.  ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅತಿಥಿಗಳನ್ನು ಸ್ವಾಗತಿಸಿದರು. ಕಾರ‍್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶಾ೦ತಲಾ ಶ್ಯಾನುಭಾಗ್ ಮತ್ತು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಲತಾ ಪ್ರಾರ್ಥಿಸಿದರು.ಉಪನ್ಯಾಸಕ ರಾಘವೇ೦ದ್ರ ಭಟ್ ಧನ್ಯವಾದ ಗೈದರು. ಉಪನ್ಯಾಸಕ ನರೇ೦ದ್ರ ಎಸ್ ಗ೦ಗೊಳ್ಳಿ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com