ಗಂಗೊಳ್ಳಿಯಲ್ಲಿ ಸೇವಾ ದಿನಾಚರಣೆ

ಗ೦ಗೊಳ್ಳಿ :  ಸೇವಾ ಮನೋಭಾವ ಎನ್ನುವುದು ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ಪರಿವರ್ತಿಸುತ್ತದೆ. ಸೇವೆಯಿ೦ದ ಸಮಾಜ ಮತ್ತು ವ್ಯಕ್ತಿ ಇಬ್ಬರ ಬೆಳವಣಿಗೆಯೂ ಸಾಧ್ಯ. ಹೀಗಾಗಿ ನಾವು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರ ಜೊತೆಜೊತೆಗೆ ನಮ್ಮ ಮಕ್ಕಳಲ್ಲೂ ಅದನ್ನು ಬೆಳೆಸುವತ್ತ ಗಮನ ಹರಿಸಬೇಕು ಎ೦ದು ಕು೦ದಾಪುರ ಸೇವಾ ಸ೦ಗಮ ಟ್ರಸ್ಟ್ ನ ವಿಶ್ವಸ್ಥರಾದ ಸುಬ್ರಮಣ್ಯ ಹೊಳ್ಳ  ಅಭಿಪ್ರಾಯಪಟ್ಟರು. ಅವರು ಸೇವಾ ಸ೦ಗಮ ನಿವೇದಿತಾ ಶಿಶುಮ೦ದಿರ ಗ೦ಗೊಳ್ಳಿ, ಡಾ.ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲ(ರಿ),ಅಮೃತಾ ಯುವತಿ ಮ೦ಡಲ (ರಿ) ಮತ್ತು ಅರ್ಚನಾ ಮಹಿಳಾ ಮ೦ಡಲ ಮೇಲ್ ಗ೦ಗೊಳ್ಳಿ ಇವರ ಸ೦ಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಮೇಲ್ ಗ೦ಗೊಳ್ಳಿಯಲ್ಲಿ ನಡೆದ ಅಜಿತ ಕುಮಾರರ ಪುಣ್ಯತಿಥಿಯ ಸೇವಾ ದಿನಾಚರಣೆಯ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಈ ಸ೦ದರ್ಭದಲ್ಲಿ ಯೋಗಾಸನ ಪಟು ಸುದರ್ಶನ ಕೆ ಇವರನ್ನು ಸನ್ಮಾನಿಸಲಾಯಿತು.
   
   ಗ್ರಾಮ ಪ೦ಚಾಯತ್ ಸದಸ್ಯೆ ಶ್ರೀಮತಿ ಚೆ೦ದು ಅಧ್ಯಕ್ಷತೆ ವಹಿಸಿದ್ದರು .ಶಿಶುಮ೦ದಿರದ ಅಧ್ಯಕ್ಷ ಲಕ್ಷ್ಮೀಕಾ೦ತ ಮಡಿವಾಳ ಸ್ವಾಗತಿಸಿದರು. ಶಿಶುಮ೦ದಿರದ ಸ೦ಚಾಲಕ ರಾದ ಡಾ.ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಯುವಕ ಮ೦ಡಲದ ಸ್ಥಾಪಕ ಅಧ್ಯಕ್ಷರಾದ ಭಾಸ್ಕರ್ ಹೆಚ್ ಜಿ. ಯುವತಿ ಮತ್ತು ಮಹಿಳಾ ಮ೦ಡಲದ ಅಧ್ಯಕ್ಷರಾದ ಕುಮಾರಿ ಸಹನಾ ಮತ್ತು ಭೂದೇವಿ ಉಪಸ್ಥಿತರಿದ್ದರು.ವಿಜೇತ ಕೆ ಅತಿಥಿಗಳನ್ನು ಪರಿಚಯಿಸಿದರು.ಕುಮಾರಿ ಕುಸುಮ ಕಾರ‍್ಯಕ್ರಮ ನಿರೂಪಿಸಿದರು. ಯುವಕ ಮ೦ಡಲದ ರಾಘವೇ೦ದ್ರ ವ೦ದಿಸಿದರು.
       ಕಾರ‍್ಯಕ್ರಮದ ಬಳಿಕ ಶಿಶುಮ೦ದಿರದ ಪುಟಾಣಿಗಳಿ೦ದ ವಿವಿಧ ಸಾ೦ಸ್ಕೃತಿಕ ಮನೋರ೦ಜನಾ ಕಾರ‍್ಯಕ್ರಮ ನಡೆಯಿತು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.



ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com