ಸ್ವಾರ್ಥ, ದ್ವೇಷ ಮರೆತು ಇತರರಿಗೆ ಉಪಕಾರಿಯಾಗಬೇಕು

ಗಂಗೊಳ್ಳಿ: ದೇಶ ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ನಾಗರಿಕ ಹಾಗೂ ಪ್ರಾಕೃತಿಕ ಸವಾಲುಗಳನ್ನು ಪರಿಹರಿಸುವಲ್ಲಿ ಇಂದಿನ ಯುವಜನಾಂಗ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ದಿವ್ಯ ಸಂದೇಶಗಳನ್ನು ನೆನಪಿಸಿ ಪ್ರತಿಯೊಬ್ಬರೂ ಸತ್ಪ್ರಜೆಗಳಾಗಿ ಸಮಾಜದಲ್ಲಿ ಬಾಳಲು ಎಲ್ಲರೂ ಉಪಕಾರಿಯಾಗಿ ಸ್ವಾರ್ಥ ದ್ವೇಷ ಮರೆತು ಬದುಕಬೇಕಿದೆ. ಭಾರತದ ಶ್ರೇಷ್ಠತೆಯನ್ನು, ಸನಾತನ ಧರ್ಮದ ಔನತ್ಯವನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾನ ಸಂತ ಸ್ವಾಮಿ ವಿವೇಕಾನಂದರನ್ನು ಸದಾ ಸ್ಮರಿಸುತ್ತಿರಬೇಕು ಎಂದು ಬೈಂದೂರು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಹೇಳಿದರು. 
ಅವರು  ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 152ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ವಿವೇಕ ಬ್ಯಾಂಡ್ ವಿತರಿಸಿ ಮಾತನಾಡಿದರು.

ವಿವೇಕ ಬ್ಯಾಂಡ್ ಕೇವಲ ಸ್ವಾಮಿ ವಿವೇಕಾನಂದ ದಿವ್ಯ ಸಂದೇಶಗಳನ್ನು ನೆನಪಿಸುವುದಷ್ಟೇ ಅಲ್ಲದೆ ರಾಷ್ಟ್ರೋದ್ಧಾರ ಕಾರ್ಯಗಳಲ್ಲಿ ಶ್ರೀರಕ್ಷೆಯಾಗಲಿದೆ. ಉತ್ತಮ ಕಾರ್ಯಗಳನ್ನು ಮಾಡಬೇಕೆಂಬ ಮಹದಾಸೆಯಿಂದ ವಿವೇಕ ಬ್ಯಾಂಡ್ ತೊಟ್ಟು ಒಳ್ಳೆಯ ಕೆಲಸ ಮಾಡಿದ ಬಳಿಕ ಬ್ಯಾಂಡ್ ತೆಗೆಯಬೇಕು ಎಂದರು.

ಬೈಂದೂರು ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ಉಮಾನಾಥ ದೇವಾಡಿಗ, ಕ್ಷೇತ್ರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಘವೇಂದ್ರ ನೆಂಪು, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಸದಸ್ಯರಾದ ಲಕ್ಷ್ಮೀ ಗಾಣಿಗ, ಶಾರದಾ ಶೇರುಗಾರ, ಲಲಿತಾ ಖಾರ್ವಿ, ಲಕ್ಷ್ಮೀಕಾಂತ ಮಡಿವಾಳ, ಸ್ಥಾನೀಯ ಸಮಿತಿ ಅಧ್ಯಕ್ಷ ರವೀಂದ್ರ ಪಟೇಲ್, ಕಾರ್ಯದರ್ಶಿ ಬಿ.ಗಣೇಶ ಶೆಣೈ, ಅಶೋಕ ಪೂಜಾರಿ, ಜಯರಾಮ ದೇವಾಡಿಗ, ಮಂತಿ ಸುರೇಶ ಖಾರ್ವಿ, ಮಂತಿ ಶ್ರೀನಿವಾಸ ಖಾರ್ವಿ, ರಾಘವೇಂದ್ರ ದೇವಾಡಿಗ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com