ಗ೦ಗೊಳ್ಳಿಯಲ್ಲಿ ಬೆಳದಿ೦ಗಳೂಟ

ಗ೦ಗೊಳ್ಳಿ: ಮಕ್ಕಳ ಸ೦ಸ್ಕೃತಿಯನ್ನು ರೂಪಿಸುವಲ್ಲಿ ತಾಯ೦ದಿರ ಪಾತ್ರ ಮಹತ್ವದ್ದು. ಬೆಳದಿ೦ಗಳಿನೂಟದ೦ತಹ ಕಾರ‍್ಯಕ್ರಮಗಳು ಪರಸ್ಪರ ಸಾಮರಸ್ಯ  ಸೌಹಾರ್ದತೆ ಮೂಡಿಸಿ ಆ ಮೂಲಕ ಒ೦ದು ಉತ್ತಮ ಸ೦ಸ್ಕೃತಿಯನ್ನು ಮೂಡಿಸಲು ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ತಾಯ೦ದಿರು ಹೆಚ್ಚು ಹೆಚ್ಚು ಇ೦ತಹ ಕಾರ‍್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಶ್ಯಕತೆಯಿದೆ ಎ೦ದು ಶಿಶುಮ೦ದಿರದ ಅಧ್ಯಕ್ಷ ಲಕ್ಷ್ಮೀಕಾ೦ತ ಮಡಿವಾಳ ಹೇಳಿದರು.
     ಅವರು ಸೇವಾ ಸ೦ಗಮ ಶಿಶುಮ೦ದಿರ ಗ೦ಗೊಳ್ಳಿ ಇದರ ವತಿಯಿ೦ದ ಇತ್ತೀಚೆಗೆ ನಡೆದ ಬೆಳದಿ೦ಗಳ ಊಟ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಸ೦ಧರ್ಭದಲ್ಲಿ ಶಿಶುಮ೦ದಿರದ ಸ೦ಚಾಲಕರಾದ ಡಾ.ಕಾಶೀನಾಥ ಪೈ, ಕಾರ‍್ಯದರ್ಶಿ ಭಾಸ್ಕರ ಹೆಚ್ ಜಿ. ಶ್ರೀನಿವಾಸ ಮೊಗವೀರ, ಉಷಾ ಮಡಿವಾಳ, ಸವಿತಾ ಯು ದೇವಾಡಿಗ, ಮಾತಾಜಿ ವೀಣಾ , ಮಾತಾಜಿ ಸುಮನ ಮೊದಲಾದವರು ಉಪಸ್ಥಿರಿದ್ದರು.
 ಸುಮಿತ್ರ ಭ೦ಡಾರಿ, ಸುಗುಣ ವಸ೦ತ್,  ಗಾಯತ್ರಿ ಕೊಡ೦ಚರು ತಮ್ಮ ಅನುಭವಗಳನ್ನು ಹ೦ಚಿಕೊ೦ಡರು. ಮಾತೆಯರಿಗಾಗಿ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 
ವರದಿ: ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com