ವಂಡ್ಸೆಯಲ್ಲಿ ಗುರುಮಾಚಿದೇವ ವಿವಿದೋದ್ದೇಶ ಸಹಕಾರಿ ಸಂಘ ಉದ್ಘಾಟನೆ

ವಂಡ್ಸೆ: ಸಹಕಾರಿ ಕ್ಷೇತ್ರದ ಉನ್ನತಿಯಿಂದ ಸಮಾಜ ಹಸನಾಗಲು ಸಾಧ್ಯವಿದೆ. ಪರಸ್ಪರ ಸಹಕಾರ ಮನೋಭಾವದೊಂದಿಗೆ ಆರ್ಥಿಕ, ಸಾಮಾಜಿಕ ಸ್ವಾವಲಂಬಿ ಚಿಂತನೆಯಿಂದ ರೂಪುಗೊಂಡ ಸಹಕಾರಿ ರಂಗದ ಬೆಳವಣಿಗೆಯಲ್ಲಿ ಹಿರಿಯರನೇಕರ ದೊಡ್ಡ ಕೊಡುಗೆ ಇದೆ. ಗುರುಮಾಚಿದೇವ ವಿವಿದೋದ್ದೇಶ ಸಹಕಾರಿ ಸಂಘ ಅತ್ಯಲ್ಪ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದರೆ ಅದಕ್ಕೆ ಹಿರಿಯರ ಮಾರ್ಗ ದರ್ಶನ, ಚಿಂತನೆಯೇ ಕಾರಣ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ವಂಡ್ಸೆ ರೋಯಲ್ ಕಾಂಪ್ಲೆಕ್ಸ್‌ನಲ್ಲಿ ಗುರುಮಾಚಿದೇವ ವಿವಿದೋದ್ದೇಶ ಸಹಕಾರಿ ಸಂಘದ ವಂಡ್ಸೆ ಶಾಖೆ ಉದ್ಘಾಟಿಸಿ ಮಾತನಾಡಿದರು. ಉಡುಪಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಘವು ವಂಡ್ಸೆಯಲ್ಲಿ 6ನೇ ಶಾಖೆ ತೆರೆಯುತ್ತಿದೆ. ಸಣ್ಣ ಸಮಾಜವೊಂದು ಈ ಮೂಲಕ ದೊಡ್ಡ ಸಾಧನೆ ಮಾಡಿದೆ. ರಾಜ್ಯದಲ್ಲಿ 33 ಸಾವಿರ ಸಹಕಾರ ಕ್ಷೇತ್ರವಿದ್ದರೂ ಕೂಡ 20 ಸಾವಿರ ಸಹಕಾರಿ ಕ್ಷೇತ್ರ ಊರ್ಜಿತದಲ್ಲಿದೆ. ಸಹಕಾರಿ ಕ್ಷೇತ್ರ ಬಲವಾಗಿದ್ದರೆ ಊರು, ಪ್ರದೇಶ ಭದ್ರವಾಗುತ್ತದೆ. ಸಹಕಾರಿ ರಂಗ ಅರ್ಥಗರ್ಭಿತ ವ್ಯವಸ್ಥೆ. ಈ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಸಮರ್ಪಣಾ ಭಾವ ಅತ್ಯಗತ್ಯ ಎಂದು ಅವರು ಹೇಳಿದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ ವಂಡ್ಸೆಯಂತಹ ಸಣ್ಣ ಫಿರ್ಕಾದಲ್ಲಿ ಸಹಕಾರಿ ಸಂಸ್ಥೆಗಳು ಬಲಿಷ್ಠವಾಗಿ ರೂಪುಗೊಳ್ಳುತ್ತಿರುವುದು ಪ್ರಗತಿಯ ಸಂಕೇತ. ಮಡಿವಾಳ ಸಮಾಜ ಪ್ರಾಮಾಣಿಕತೆಗೆ ಹೆಸರು. ಸಮಾಜದ ಸಹಕಾರಿ ಕ್ಷೇತ್ರವು ಎಲ್ಲಾ ಸಮಾಜದ ಸಂಸ್ಥೆಯಾಗಿ ರೂಪುಗೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದರು.

ಉಡುಪಿ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಉದಯಕುಮಾರ ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿ ಗುರುಮಾಚಿದೇವರ ಹೆಸರಿನಲ್ಲಿ ಆರಂಭಗೊಂಡ ಸಹಕಾರಿ ಸಂಘ ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದುನಿಲ್ಲಲು ಗುರುಮಾಚಿದೇವರ ಅನುಗ್ರಹವೇ ಕಾರಣ. ಕಷ್ಟದಲ್ಲಿ ಸಹಕರಿಸುವ ಸಹಕಾರಿ ಕ್ಷೇತ್ರವನ್ನು ಯಾರೂ ಮರೆಯಬಾರದು. ಪರಸ್ಪರ ಸಹಕಾರದ ಮಂತ್ರದೊಂದಿಗೆ ಕಾರ್ಯಾಚರಿಸುವ ಸಹಕಾರ ಸಂಸ್ಥೆಗಳನ್ನು ಭದ್ರಪಡಿಸುವ ಹೊಣೆಗಾರಿಕೆ ನಾಗರಿರದ್ದಾಗಿದೆ ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com