ಇಡೂರು-ಕುಂಜ್ಞಾಡಿ ಗ್ರಾಮದ ಕೇಂದ್ರ ಸ್ಥಾನ ಬದಲಾವಣೆಗೆ ವಿರೋಧ

ಹೆಮ್ಮಾಡಿ: ಸರಕಾರ ಇಡೂರು- ಕುಂಜ್ಞಾಡಿ ಗ್ರಾಮ ಪಂಚಾಯಿತಿ ಘೋಷಣೆ ಬೆನ್ನಲ್ಲೇ ಹೊಸೂರು ಕೇಂದ್ರ ಸ್ಥಾನ ಮಾಡುವ ನಿಟ್ಟಿನಲ್ಲಿ ಕೆಲವರು ನಡೆಸುತ್ತಿರುವ ಪ್ರಯತ್ನಕ್ಕೆ ಗ್ರಾಮಸ್ಥರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಮೊದಲಿನಿಂದಲೂ ಇಡೂರು ಕೇಂದ್ರ ಸ್ಥಾನವಾಗಿದ್ದು ಇದು ಮುಂದು ವರಿಯಬೇಕು. ಯಾವುದೇ ಕಾರಣಕ್ಕೂ ಹೊಸೂರು ಕೇಂದ್ರ ಸ್ಥಾನ ಮಾಡಕೂಡದು ಎಂದು ಒತ್ತಾಯಿಸಿದರು. 

ಇಡೂರು- ಕುಂಜ್ಞಾಡಿ ಶಾಲಾ ವಠಾರದಲ್ಲಿ ಜರುಗಿದ ಗ್ರಾಮಸ್ಥರ ಸಭೆಯಲ್ಲಿ ನ್ಯಾಯವಾದಿ ಸರ್ವೋತ್ತಮ ಶೆಟ್ಟಿ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಕೆಲವು ಸ್ಥಾಪಿತ ಹಿತಾಸಕ್ತಿಗಳು ಕೇಂದ್ರಸ್ಥಾನವನ್ನು ಹೊಸೂರಿಗೆ ವರ್ಗಾಯಿಸುವ ಪ್ರಯತ್ನ ನಡೆಸುತ್ತಿವೆ. ಇದು ಖಂಡನಾರ್ಹ. ಹೊಸೂರು ಗ್ರಾಮಸ್ಥರು ಎಲ್ಲ ವಿಚಾರ ಗಳಿಗೂ (ಸರಕಾರಿ ಮತ್ತು ಖಾಸಗಿ) ಇಡೂರು ಗ್ರಾಮವನ್ನೇ ನೆಚ್ಚಿಕೊಂಡಿದ್ದಾರೆ ಎಂದರು. 

ಸಭೆಯಲ್ಲಿ ಇಡೂರು ಕೇಂದ್ರ ಸ್ಥಾನವಾಗಬೇಕೆಂಬ ಒಮ್ಮತದ ನಿರ್ಣಯ ಮಂಡಿಸಲಾಯಿತು. ಒಂದೊಮ್ಮೆ ಹೊಸೂರಿಗೆ ಕೇಂದ್ರಸ್ಥಾನ ವರ್ಗಾಯಿಸುವ ಯತ್ನ ನಡೆದ್ದಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳುವ ತೀರ್ಮಾನ ತೆಗೆದುಕೊಳ್ಳಲಾಯಿತು. 

ನಿವೃತ್ತ ಅಧ್ಯಾಪಕ ಕರುಣಾಕರ ಶೆಟ್ಟಿ ಕುಕ್ಕಡ, ಗೋಪಾಲ ಶೆಟ್ಟಿ ದೊಡ್ಮನೆ, ಅಣ್ಣಪ್ಪ ನಾಯ್ಕ್ ಇಡೂರು, ಗ್ರಾ.ಪಂ.ಸದಸ್ಯ ಗೋವರ್ಧನ್ ಶೆಟ್ಟಿ, ಸಂತೋಷಕುಮಾರ ಶೆಟ್ಟಿ, ಸುಶೀಲ ಪೂಜಾರ‌್ತಿ, ಯಮುನಾ, ಶಶಿಕಾಂತ ಶ್ಯಾನುಭಾಗ್, ವಂಡ್ಸೆ ಸಿಎ ಬ್ಯಾಂಕ್ ನಿರ್ದೇಶಕ ನಾಗೇಶ್ ನಾಯಕ್, ಗ್ರಾ.ಪಂ.ಮಾಜಿ ಅಧ್ಯಕ್ಷ ಜಯಕರ ಶೆಟ್ಟಿ, ಅರಣ್ಯ ಸಮಿತಿ ಅಧ್ಯಕ್ಷ ಇಡೂರು ರವೀಂದ್ರನಾಥ ಶೆಟ್ಟಿ, ಇಂಬು ಬಾಲಕಷ್ಣ ಶೆಟ್ಟಿ ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯ ಶಶಿಕಾಂತ್ ಶ್ಯಾನುಭಾಗ್ ವಂದಿಸಿದರು. ನಿರ್ಣ ಯವನ್ನು ಶಾಸಕರು ಹಾಗೂ ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com