ದೀಪದಿಂದ ಸದ್ಭಾವನೆ ಬೆಳಕು ಬೆಳಗುತ್ತದೆ: ವಾದಿರಾಜ್‌ ಭಟ್‌

ಹೆರಂಜಾಲು:  ದೀಪವು ಜ್ಞಾನದ ಸಂಕೇತ, ದೀಪ ಬೆಳಗಿದಾಗ ಅಂತರಂಗದಲ್ಲಿ ಹೊಸತನವನ್ನು ತರುತ್ತದೆ. ಒಳ್ಳೆಯ ಕಾರ್ಯ ಒಳ್ಳೆಯ ಭಾವನೆ ಮೂಡಿದಾಗ ಆರೋಗ್ಯ, ಸಂಪತ್ತು ವೃದ್ಧಿಯಾಗುತ್ತದೆ. ಶತ್ರುಭಾವನೆ ನಾಶವಾಗುತ್ತದೆ. ಮನಸ್ಸಿನ ಅಂಧಕಾರ ನಮ್ಮೊಳಗೆ ನಿರಂತರ ಸದ್ಭಾವನೆಯ ಬೆಳಕು ಬೆಳಗುತ್ತದೆ.ಎಂದು ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಪ್ರೊ|.ಕನರಾಡಿ ವಾದಿರಾಜ್‌ ಭಟ್‌ ಹೇಳಿದರು.

ಅವರು ಹೆರಂಜಾಲು ಮಹತೋಭಾರ ಶ್ರೀ ಗುಡೇ ಮಹಾಲಿಂಗೇಶ್ವರ ದೇವಾಲಯದಲ್ಲಿ  ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪು³ಂದ ವಲಯದ 20ನೇ ವಾರ್ಷಿಕ ಅಧಿಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.

ಪರಿಷರತ್ತಿನ ಸ್ಥಾಪಕಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರು ಹಿಂದಿನ ಪದಾಧಿಧಿಕಾರಿಗಳನ್ನು ಸಮ್ಮಾನಿಸಿದರು. ವಲಯದ ಅಧ್ಯಕ್ಷ ರಾಜಾರಾಮ್‌ ಭಟ್‌ಯು.ಎಚ್‌. ಅಧ್ಯಕ್ಷತೆ ವಹಿಸಿದ್ದರು.

ಗೌರವಾಧ್ಯಕ್ಷ ಗಣೇಶ ಮಯ್ಯ ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣಾ ಉಡುಪ, ಕಾರ್ಯದರ್ಶಿ ಗಣೇಶ ಕಾರಂತ ಉಪಸ್ಥಿತರಿದ್ದರು,

ಕೋಶಾಧ್ಯಕ್ಷ ಅರುಣ ಕುಮಾರ ಶ್ಯಾನುಭೋಗ್‌ ಸ್ವಾಗತಿಸಿದರು, ಉಪಾಧ್ಯಕ್ಷ ಜಗದೀಶರಾವ್‌ ಪರಿಚಯಿಸಿದರು, ಪ್ರಶಾಂತ ಮಯ್ಯ ನಿರೂಪಿಸಿದರು. ಮಾಜಿಯುವ ವೇದಿಕೆ ಅಧ್ಯಕ್ಷ ಸಂದೇಶ ಭಟ್‌ ವಂದಿಸಿದರು.


ಸಮಾರೋಪ ಸಮಾರಂಭದಲ್ಲಿ  ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ  ಅತೀ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು, ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ 20 ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರ ಹಾಗೂ ಪೊಲೀಸ್‌ ಇಲಾಖೆಯಲ್ಲಿ ನಿವೃತ್ತರಾದ ಪ್ರಭಾಕರ ಮೇರ್ಟಾ, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಗಿರಿಜಾಮಯ್ಯ ಹಾಗೂ ಕೃಷಿ ಕ್ಷೇತ್ರದ ಸಾಧನೆಗಾಗಿ ವಿಜಯ ಹೆಗಡೆ ಅವರುಗಳನ್ನು ಪರಿಷತ್ತಿನ ವತಿಯಿಂದ ಸಮ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಂಸ್ಕೃತ ವಿದ್ವಾನ್‌ ಚನ್ನಕೇಶವ ಭಟ್‌ ಬಸ್ರೂರು, ತಾಲೂಕು ಕಾರ್ಯದರ್ಶಿ ಹಳ್ಳಿ ಶ್ರೀನಿವಾಸ ಭಟ್‌, ಕಿರಿಮಂಜೇಶ್ವರ ದೇವಳದ ಆಡಳಿತ ಕಾರ್ಯದರ್ಶಿ ಉಮೇಶ ಶ್ಯಾನುಭೋಗ್‌ ಭಾಗವಹಿಸಿದ್ದರು. ವಲಯದ ಅಧ್ಯಕ್ಷ ರಾಜರಾಮ್‌ ಭಟ್‌ ಯು.ಎಚ್‌. ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಗಣೇಶ ಮಯ್ಯ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಉಡುಪ ವೇದಿಕೆಯಲ್ಲಿದ್ದರು, ಕಾರ್ಯದರ್ಶಿ ಗಣೇಶ ಕಾರಂತ ಸ್ವಾಗತಿಸಿದರು. ಊ.ನಾಗರಾಜ ಮೇರ್ಟಾ ಕಾರ್ಯಕ್ರಮ ನಿರೂಪಿಸಿದರು.ಸುನೀಲ್‌ ಹೊಳ್ಳ ಉಪ್ಪುಂದ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com