ಸಂಗೀತ ಪ್ರಿಯರ ಮನಗೆದ್ದ ಇನಿದನಿ ಸಂಗೀತ ಸಂಜೆ

ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ಸಂಸ್ಥೆಯು ಕಳೆದ ನಾಲ್ಕು ವರುಷದಿಂದ ಕನ್ನಡ ಚಿತ್ರಗೀತೆಗಳ ಪ್ರೇಮಿಗಳಿಗಾಗಿ ನಡೆಸಿಕೊಂಡು ಬರುತ್ತಿರುವ "ಇನಿದನಿ' ವಿಶಿಷ್ಟ ಸಂಗೀತ ರಸಮಂಜರಿ ಕಾರ್ಯಕ್ರಮ  ಕುಂದಾಪುರದ ಬೋರ್ಡ್‌ ಹೈಸ್ಕೂಲ್‌ ವಠಾರದಲ್ಲಿ ನಡೆಯಿತು.
   ಸಂಗೀತ, ಸಾಹಿತ್ಯ ಮತ್ತು ರಾಗ ಸಂಯೋಜನೆಯುಳ್ಳ 70-80ರ ದಶಕದ ಹಾಡುಗಳನ್ನು ಆಯ್ದುಕೊಂಡು ಖ್ಯಾತಿವೆತ್ತ ಗಾಯಕ- ಗಾಯಕಿಯರು ಮತ್ತು ಹಿಮ್ಮೇಳದವರಿಂದ ಚಲನ ಚಿತ್ರದಲ್ಲಿ ರುವಂತೆ ಮೂಲ ಶೈಲಿಯಲ್ಲಿ ನುಡಿಸಿ, ಹಾಡಿಸುವ ವಿಶಿಷ್ಟ ಕಾರ್ಯಕ್ರಮದಲ್ಲಿ ಒಟ್ಟು 7 ಮಂದಿ ಗಾಯಕ-ಗಾಯಕಿಯರು, ಹಿಮ್ಮೇಳ‌ದಲ್ಲಿ 11 ಮಂದಿ ಕಲಾವಿದರು ಸಂಗೀತ ನೀಡಿದರು.  ಸಮಾನ ಅಭಿರುಚಿ ಹೊಂದಿದ ಸ್ನೇಹಿತರ ಕೂಟವಾಗಿರುವ ಕಲಾಕ್ಷೇತ್ರ ಸಮಾಜಕ್ಕೆ ನೀತಿಯನ್ನು ಸಾರುವ ಒಳ್ಳೆಯ ಸಂದೇಶವನ್ನು ನೀಡುವ ಹಳೆಯ ಕನ್ನಡ ಚಿತ್ರಗೀತೆಗಳ ಇನಿದನಿ ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮವು ಕುಂದಾಪುರದ ಸಂಗೀತ ಪ್ರೇಮಿಗಳ ಮೆಚ್ಚುಗೆಯನ್ನು ಪಡೆದಿದೆ.

ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದ ಶುದ್ಧ‌, ನೈಸರ್ಗಿಕ, ಆಹಾರೋತ್ಪನ್ನಗಳ ತಯಾರಿಕಾ ಘಟಕವಾದ ಹೆಮ್ಸ್‌ ಸಂಸ್ಥೆಯು ತನ್ನ ಪ್ರಾಯೋಜಕತ್ವವನ್ನು ನೀಡಿತ್ತು.

ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್‌ ಕುಮಾರ್‌, ಉಪಾಧ್ಯಕ್ಷರಾದ ಕೆ.ಆರ್‌. ನಾಯ್ಕ, ರಾಜೇಶ ಕಾವೇರಿ, ಸುರೇಶ ನಾಯಕ್‌, ಪ್ರವೀಣ್‌ ಕುಮಾರ್‌ ಟಿ., ಶ್ರೀಧರ್‌ ಸುವರ್ಣ, ಮಾಜೀ ಸಂಸದ ಕೆ.ಜಯಪ್ರಕಾಶ್‌ ಹೆಗ್ಡೆ,  ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಕೊಲ್ಲೂ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಕೃಷ್ಣ ಪ್ರಸಾದ ಅಡ್ಯಂತಾಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಕಾಶ್‌ ತೋಳಾರ್‌ ಸೇರಿದಂತೆ ಸಾವಿರಾರು ಮಂದಿ ಕಾರ್ಯಕ್ರಮ ವೀಕ್ಷಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com