ಜೇಸಿಐ ಕುಂದಾಪುರ ಸಿಟಿ: ಪದಪ್ರದಾನ ಸಮಾರಂಭ

ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ೨೦೧೫-೧೬ನೇ ಸಾಲಿನ ಪದಪ್ರದಾನ ಸಮಾರಂಭ ಜ.೦೮ರಂದು ಕುಂದಾಪುರದ ಈಸ್ಟ್‌ವೆಸ್ಟ್ ಕಂಟ್ರಿ ಕ್ಲಬ್‌ನಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಚಂದ್ರಕಾಂತ್ ಅವರು ಜೇಸಿ ವಲಯ-೧೫ರ ವಲಯಾಧ್ಯಕ್ಷ ಕೃಷ್ಣ ಮೋಹನ್ ಪಿ. ಎಸ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಲಾಯಿತು. ಇದೇ ಸಂದರ್ಭದಲ್ಲಿ ಸೇವಾ ಸಾಧಕ ಮಂಜುನಾಥ ಕಾಮತ್, ಭಾರತೀಯ ಜೇಸಿಸ್‌ನ ರಾಷ್ಟ್ರೀಯ ನಿರ್ದೇಶಕ ಸಂಪತ್ ಬಿ. ಸುವರ್ಣ, ಜೇಸಿ ವಲಯ-೧೫ರ ವಲಯಾಧ್ಯಕ್ಷ ಕೃಷ್ಣಮೋಹನ್ ಪಿ.ಎಸ್, ವಲಯ ಉಪಾಧ್ಯಕ್ಷ ನಾಗೇಂದ್ರ ಪೈ, ನಿಕಟಪೂರ್ವಾಧ್ಯಕ್ಷ ನಿತಿನ್ ಅವಭೃತ ಅವರನ್ನು ಗೌರವಿಸಲಾಯಿತು. ಜೇಸಿಐ ಕುಂದಾಪುರ ಸಿಟಿಯ ದಶಮಾನೋತ್ಸವ ಸಮಿತಿ ವತಿಯಿಂದ ಬೆನ್ನು ಮೂಳೆ ಮುರಿತಕ್ಕೊಳಗಾಗಿರುವ ಭಾಸ್ಕರ ಪೂಜಾರಿ ಅವರಿಗೆ ಧನ ಸಹಾಯ ನೀಡಲಾಯಿತು. ಮುಖ್ಯ ಅತಿಥಿಯಾಗಿ ನಾಗೂರಿನ ಕುಸುಮ ಹೋಮ್ಸ್ ಪ್ರೈ. ಲಿ.ನ ವ್ಯವಸ್ಥಾಪಕ ನಿರ್ದೇಶಕ ನಳಿನ್‌ಕುಮಾರ್ ಶೆಟ್ಟಿ, ಪೂರ್ವ ವಲಯಾಧ್ಯಕ್ಷ ಜಾನ್ ಆರ್. ಡಿಸಿಲ್ವಾ, ಜೇಸಿಐ ಕುಂದಾಪುರ ಸಿಟಿಯ ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ಥ, ಕಾರ್ಯದರ್ಶಿ ರಾಘವೇಂದ್ರ ಚರಣ್ ನಾವಡ, ಗೌರವಾಧ್ಯಕ್ಷ ಹುಸೇನ್ ಹೈಕಾಡಿ, ನೂತನ ಜೇಸಿರೆಟ್ ಅಧ್ಯಕ್ಷೆ ಸುನೀತಾ ಶ್ರೀಧರ, ಜ್ಯೂ. ಜೇಸಿ ಅಧ್ಯಕ್ಷ ಸನತ್ ಶೇಟ್ ಉಪಸ್ಥಿತರಿದ್ದರು. ಜೇಸಿರೆಟ್ ಪೂರ್ವಾಧ್ಯಕ್ಷೆ ಜಯಶೀಲ ಪೈ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ನಾಗೇಶ ನಾವಡ ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com